ETV Bharat / state

ಗೆಲುವಿನ ಖುಷಿಯಲ್ಲಿ ಅಂತರ ದೂರ: ಶಾಸಕ, ತಹಶೀಲ್ದಾರರಿಗೂ ತಿಳಿಯದಾಯಿತೇ ಕೊರೊನಾ ಕಾಳಜಿ

author img

By

Published : May 28, 2020, 8:30 PM IST

ಜನಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು ಜನರ ಜೊತೆಗೂಡಿ ಸಾಮಾಜಿಕ ಅಂತರ ಮರೆತು ಎಂಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಅಭಿನಂದನೆ ಮಾಡುವಲ್ಲಿ ತಲ್ಲೀನರಾಗಿದ್ದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆಯಿತು.

gadag-lakshmeshwar-apmc-election
ಲಕ್ಷ್ಮೇಶ್ವರ ಪಟ್ಟಣ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಎಪಿಎಂಸಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ವೇಳೆ, ಶಾಸಕರು ಹಾಗೂ ತಹಶೀಲ್ದಾರರಿಂದ ಸಾಮಾಜಿಕ ಅಂತರ ಸಮಾಜಕ್ಕೆ ಯಾಕೆ ಎನ್ನುವ ಭಾವನೆ ಮೂಡುವಂತಿತ್ತು.

ಬಿಜೆಪಿ ಬೆಂಬಲಿತ ನೀಲಪ್ಪ ಹತ್ತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೋಮಣ್ಣ ಎಂಬುವವರು ಆಯ್ಕೆಯಾಗಿದ್ದಾರೆ. ಈ ವೇಳೆ ಅಪಾರ ಅಭಿಮಾನಿಗಳ ಬಳಗ, ಕಾರ್ಯಕರ್ತರ ವೃಂಧ ಕೊರೊನಾ ಸೋಂಕಿನ ಭಯವಿಲ್ಲದೆ ಸಾಮಾಜಿಕ ಅಂತರ ನಮಗ್ಯಾಕೆ, ಮಾಸ್ಕ್​ ಇನ್ಯಾಕೆ ಎನ್ನುವಂತಿದ್ದರು.

ಸ್ಥಳದಲ್ಲಿಯೇ ಬಿಜಪಿ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ ಬ್ರಮರಾಂಭ ಗುಬ್ಬಿಶೆಟ್ಟಿ ಹಾಗೂ ಸಿಬ್ಬಂದಿ ಇದ್ದರೂ ಕೂಡಾ ಜನರಿಗೆ ತಿಳುವಳಿಕೆ ಹೇಳುವ ಗೋಜಿಗೆ ಮಾತ್ರ ಹೋಗಲಿಲ್ಲ. ಬದಲಿಗೆ ನಮ್ಮದೂ ಒಂದು ಕೈ ಇರಲಿ ಎಂದು ಗುಂಪಿನಲ್ಲಿ ಗೋವಿಂದ ಎಂದರು.

ಆಡಳಿತ ಪಕ್ಷದ ಶಾಸಕರು, ಸರ್ಕಾರದ ಪ್ರತಿನಿಧಿಸುವ ತಹಶೀಲ್ದಾರರೇ ನಿಯಮ ಉಲ್ಲಂಘನೆ ಮಾಡುವುದು ಯಾವ ನ್ಯಾಯ? ಅಂತ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ‌ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.