ETV Bharat / state

ಥೂ ಇದೂ ಒಂದ್‌ ಆಸ್ಪತ್ರೆನಾ.. ನೆಲದ ಮೇಲೆ ರೋಗಿ, ಡ್ರಿಪ್ ಕೈಯಲ್ಲೇ ಹಿಡಿದ ಅಜ್ಜಿ.. - ಗದಗ

ಕಾರಿಡಾರ್​ನಲ್ಲೇ ಮಕ್ಕಳಿಗೆ ಡ್ರಿಪ್ ಹಾಕ್ತಾರೆ. ಹಾಸಿಗೆ ಇಲ್ಲದೆ ರೋಗಿಗಳನ್ನು ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ‌ ನೀಡ್ತಾರೆ.

gdg
ಗದಗ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ
author img

By

Published : Dec 1, 2019, 1:04 PM IST

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎನ್ನುವಂತಾಗಿದೆ.

ಸರ್ಕಾರಿ ಆಸ್ಪತ್ರೆಗೇ ಬಡಿದಿದೆ ದೊಡ್ಡರೋಗ..

ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರದಿಂದ ಬಳಲುತ್ತಿರುವ ಅಜ್ಜಿಯೊಬ್ಬರು ತನ್ನ ಕೈಯಲ್ಲೇ ಡ್ರಿಪ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಕಾರಿಡಾರ್​ನಲ್ಲೇ ಮಕ್ಕಳಿಗೆ ಡ್ರಿಪ್ ಹಾಕಲಾಗ್ತಿದೆ. ಹಾಸಿಗೆ ಇಲ್ಲದೆ ರೋಗಿಯೊಬ್ಬನನ್ನು ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ‌ ನೀಡಲಾಗ್ತಿದೆ.‌

ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಈ ಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಸೂಕ್ತ ಚಿಕಿತ್ಸೆ ಸಿಗದೇ ಡ್ರಿಪ್ ಹಿಡಿದುಕೊಂಡು ವೃದ್ಧ ರೋಗಿಯ ಪರದಾಟ....ರೋಗಿಗಳ ಪಾಲಿಗೆ ನರಕವಾಗಿದೆ ಸರ್ಕಾರಿ ಆಸ್ಪತ್ರೆ...

ಆಂಕರ್-ಸರ್ಕಾರಿ ಆಸ್ಪತ್ರೆಗಳೆಂದ್ರೆ ಬಡವರ ಪಾಲಿಗೆ ಸಂಜಿವೀನಿ ಅಂತಾರೆ. ಆದ್ರೆ ಇಲ್ಲೊಂದು ಆಸ್ಪತ್ರೆ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಬಡವರಿಗೆ ನರಕಸದೃಶ್ಯವಾಗಿ ಮಾರ್ಪಾಡಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸರಕಾರಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತಾಗಿದೆ. ಆಸ್ಪತ್ರೆಗೆ ಬರೋ ರೋಗಿಗಳನ್ನು ಹೆಣಕ್ಕಿಂತ ಕಡೆಯಾಗಿ ನೋಡಲಾಗ್ತಿದೆ. ಇದಕ್ಕೆಲ್ಲಾ ಸಾಕ್ಷಿಯೆನ್ನೋವಂತೆ ಅನೇಕ ದೃಶ್ಯಗಳು ಕಣ್ಣಿಗೆ ರಾಚುತ್ತವೆ. ಜ್ವರದಿಂದ ಬಳಲುವ ಅಜ್ಜಿಯೊಬ್ಬಳು ತನ್ನ ಕೈಯಲ್ಲೇ ಡ್ರಿಪ್ ಹಿಡಿದುಕೊಂಡು ಅಡ್ಡಾಡ್ತಿದ್ರೆ, ಮತ್ತೊಂದೆಡೆ ಕಾರಿಡಾರ್ ನಲ್ಲೇ ಮಕ್ಕಳಿಗೆ ಡ್ರಿಪ್ ಹಾಕಲಾಗ್ತಿದೆ. ಜೊತೆಗೆ‌ ಬೆಡ್ ಇಲ್ಲದೇನೆ ರೋಗಿಯೊಬ್ಬನನ್ನು ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ‌ ನೀಡಲಾಗ್ತಿದೆ.‌ ಇಷ್ಟೆಲ್ಲ ಅಮಾನವೀಯ ಘಟನೆ‌ ನಡೀತಾಯಿದ್ರೂ ಕೂಡ ಇಲ್ಲಿನ ವೈದ್ಯಾಧಿಕಾರಿಗಳಾಗಲಿ ಅಥವಾ ಆಸ್ಪತ್ರೆ ಸಿಬ್ಬಂದಿಯವರಾಗಲಿ ಯಾರೂ ಸಹ ತಲೆಕೆಡಿಸಿಕೊಳ್ತಿಲ್ಲ. ಕನಿಷ್ಟ ಈ ರೋಗಿಗಳಿಗೆ ಏನು ಬೇಕು ಏನು ಬೇಡ ಎನ್ನೋದನ್ನೂ ಸಹ ಕೇಳುವ ಸೌಜನ್ಯವನ್ನು ಇಲ್ಲಿನ ಸಿಬ್ಬಂದಿ ತೋರ್ತಿಲ್ಲ. ಇಲ್ಲಿನ ಸಂಪೂರ್ಣ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.