ETV Bharat / state

ಕೇಳೋರಿಲ್ಲ ನೆರೆ ಸಂತ್ರಸ್ತರ ಗೋಳು... ರೈಲ್ವೆ ನಿಲ್ದಾಣವೇ ಈಗಿವರ ಆಶ್ರಯ ತಾಣ! - Hole aluru peopel stay in Railway Station

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಸ್ಥರು ಪ್ರವಾಹದಿಂದಾಗಿ ರಾತ್ರಿಯಿಡೀ ರೈಲ್ವೆ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದು, ಪ್ರವಾಹಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ರೈಲ್ವೆ ನಿಲ್ದಾಣ
author img

By

Published : Oct 22, 2019, 7:29 PM IST

ಗದಗ: ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ಪ್ರವಾಹದ ಅಬ್ಬರಕ್ಕೆ ತತ್ತರಿಸಿ ಹೋದ ನೆರೆ ಸಂತ್ರಸ್ತರ ಬದುಕು ಸದ್ಯ ಬೀದಿಪಾಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಸ್ಥರ ಪರದಾಟವಂತೂ ಹೇಳತೀರದಾಗಿದೆ.

ಕೇಳೋರಿಲ್ಲ ಸಂತ್ರಸ್ತರ ಗೋಳು

ಹೊಳೆ ಆಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನುಗ್ಗಿದ ಪ್ರವಾಹದ ನೀರಿನಿಂದ ಜನರು ಜೀವ ಉಳಿಸಿಕೊಳ್ಳಲು ಎತ್ತರದಲ್ಲಿರೋ ಹೊಳೆ ಆಲೂರಿನ ರೈಲ್ವೆ ನಿಲ್ದಾಣಕ್ಕೆ ಹೋಗಿ ಠಿಕಾಣಿ ಹೂಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿಯೇ ಮಲಗೋ ವ್ಯವಸ್ಥೆ ಮಾಡಿಕೊಂಡ ನೆರೆ ಸಂತ್ರಸ್ತರು, ರಾತ್ರಿಯಿಡೀ ನಿಲ್ದಾಣದಲ್ಲಿ ಉಳಿದು ಪ್ರವಾಹಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ಭಾಗದಲ್ಲಿ ಮೂರು ತಿಂಗಳಲ್ಲಿ ಮೂರನೇ ಬಾರಿ ಹೊಳೆ ಆಲೂರು, ಬಸರಕೋಡ, ಅಮರಗೋಳ, ಕುರುವಿನಕೊಪ್ಪ, ಗಾಡಗೋಳಿ ಗ್ರಾಮಗಳನ್ನೂ ಸುತ್ತುವರೆದು ಗ್ರಾಮಸ್ಥರನ್ನು ನೆರೆ ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ನೂರಾರು ಕುಟುಂಬಗಳು ಊಟ, ನಿದ್ದೆ ಇಲ್ಲದೇ ಸಂಕಟ ಅನುಭವಿಸುತ್ತಾ ರೈಲ್ವೆ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ.

ಇನ್ನು ಗ್ರಾಮದ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಗೆ ನೀರು ನುಗ್ಗಿದ ಪರಿಣಾಮ ಶಾಲೆ ಸಂಪೂರ್ಣವಾಗಿ ಜಲಾವೃತವಾಗಿದೆ. ಅಂಧ ಮಕ್ಕಳನ್ನು ದೀಪಾವಳಿ ಹಬ್ಬಕ್ಕೆಂದು ಊರಿಗೆ ಕಳಿಸಿದ್ರಿಂದ ಯಾವುದೇ ತೊಂದರೆಯಾಗಿಲ್ಲ. ಗ್ರಾಮದ ಎಚ್ಚರೇಶ್ವರ ಪ್ರೌಢ ಶಾಲೆಯೂ ಸಹ ಜಲಾವೃತವಾಗಿದೆ. ಶಾಲೆ ಆರಂಭದ ದಿನವೇ ಶಾಲೆಗೆ ನೀರು ನುಗ್ಗಿದ್ದು, ವಿದ್ಯಾರ್ಥಿಗಳು ಆತಂಕಗೊಳ್ಳುವಂತೆ ಮಾಡಿದೆ.

ಇನ್ನೊಂದೆಡೆ ಹೊಳೆ ಮಣ್ಣೂರು ಗ್ರಾಮಕ್ಕೂ ಸಹ ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ನೀರು ನುಗ್ಗಿದ ಪರಿಣಾಮ ಮನೆಗಳೆಲ್ಲವೂ ಜಲಾವೃತವಾಗಿವೆ. ಪ್ರವಾಹಕ್ಕೆ ಹೆದರಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮನೆಯ ಸಾಮಾಗ್ರಿಗಳನ್ನು ಹೇರಿಕೊಂಡು ಗ್ರಾಮ ತೊರೆಯುತ್ತಿರೋ ದೃಶ್ಯಗಳು ಸಾಮಾನ್ಯವಾಗಿವೆ.

ಶಿರಹಟ್ಟಿ ತಾಲೂಕಿನ ಗೋವನಕೊಪ್ಪ ಗ್ರಾಮದ ಜವಳಿ ಹಳ್ಳದಲ್ಲಿ 68 ಕುರಿಗಳು ಕೊಚ್ಚಿ ಹೋಗಿವೆ.‌ ಆದರೆ ವಿಚಿತ್ರ ಹಾಗೂ ಅದೃಷ್ಟ ಅಂದ್ರೆ ಆ ಕುರಿಗಳ ಹಿಂಡಿನಲ್ಲಿ ಎರಡೇ ಎರಡು ಕುರಿಗಳು ಜೀವ ಉಳಿಸಿಕೊಂಡಿವೆ. ಕುರಿಗಳು ಮಾಲತೇಶ್ ಆಲೂರು ಮತ್ತು ಪ್ರಕಾಶ ಚನ್ನದಾಸರ ಎಂಬವವರಿಗೆ ಸೇರಿದವುಗಳಾಗಿದ್ದು, ಶಿರಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಇದು ‌ನೆರೆ ಸಂತ್ರಸ್ತರ ಗೋಳಾಟದ ಚಿತ್ರಣ

ಆಂಕರ್-ಮಲಪ್ರಭ ಹಾಗೂ ಬೆಣ್ಣೆ ಹಳ್ಳದ ಪ್ರವಾಹದ ಅಬ್ಬರಕ್ಕೆ ತತ್ತರಿಸಿಹೋದ ನೆರೆ ಸಂತ್ರಸ್ತರ ಬದುಕು ಸದ್ಯ ಬೀದಿ ಪಾಲಾಗಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಸ್ಥರ ಪರದಾಟವಂತೂ ಹೇಳ ತೀರದಾಗಿದೆ. ಹೊಳೆ ಆಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನುಗ್ಗಿದ ಪ್ರವಾಹದ ನೀರಿನಿಂದ ಜನರು ಜೀವ ಉಳಿಸಿಕೊಳ್ಳಲು ಎತ್ತರದಲ್ಲಿರೋ ಹೊಳೆ ಆಲೂರಿನ ರೈಲ್ವೇ ನಿಲ್ದಾಣಕ್ಕೋಗಿ ಠಿಕಾಣಿ ಹೂಡಿದ್ದಾರೆ. ರೈಲ್ವೇ ನಿಲ್ದಾಣದಲ್ಲಿಯೇ ಮಲಗೋ ವ್ಯವಸ್ಥೆ ಮಾಡಿಕೊಂಡ ನೆರೆ ಸಂತ್ರಸ್ತರು ರಾತ್ರಿಯಿಡೀ ರೈಲ್ವೇ ನಿಲ್ದಾಣದಲ್ಲಿ ಉಳಿದು ಪ್ರವಾಹಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರನೇ ಬಾರಿ ಹೊಳೆ ಆಲೂರು , ಬಸರಕೋಡ, ಅಮರಗೋಳ, ಕುರುವಿನಕೊಪ್ಪ, ಗಾಡಗೋಳಿ ಗ್ರಾಮಗಳನ್ನೂ ಸುತ್ತುವರೆದು ಗ್ರಾಮಸ್ಥರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ ಹೀಗಾಗಿ ನೂರಾರು ಕುಟುಂಬಗಳು ಊಟ, ನಿದ್ದೆ ಇಲ್ಲದೇ ಸಂಕಟ ಅನುಭವಿಸುತ್ತಾ ರೈಲ್ವೇ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಇನ್ನು ಗ್ರಾಮದ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಗೆ ನೀರು ನುಗ್ಗಿದ ಪರಿಣಾಮ ಶಾಲೆ ಸಂಪೂರ್ಣವಾಗಿ ಜಲಾವೃತವಾಗಿದೆ. ಅಂಧ ಮಕ್ಕಳನ್ನು ದೀಪಾವಳಿ ಹಬ್ಬಕ್ಕೆಂದು ಊರಿಗೆ ಕಳಿಸಿದ್ರಿಂದ ಯಾವುದೇ ತೊಂದರೆಗಳಾಗಿಲ್ಲ. ಗ್ರಾಮದ ಎಚ್ಚರೇಶ್ವರ ಪ್ರೌಢಶಾಲೆಯೂ ಸಹ ಜಲಾವೃತವಾಗಿದೆ. ಶಾಲೆ ಆಂಭದ ದಿನವೇ ಶಾಲೆಗೆ ನೀರು ನುಗ್ಗಿದ್ದು ವಿದ್ಯಾರ್ಥಿಗಳು ಆತಂಕಗೊಳ್ಳುವಂತೆ ಮಾಡಿದೆ. ಇನ್ನೊಂದೆಡೆ ಹೊಳೆ ಮಣ್ಣೂರು ಗ್ರಾಮಕ್ಕೂ ಸಹ ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹದ ನೀರು ನುಗ್ಗಿದ ಪರಿಣಾಮ ಮನೆಗಳೆಲ್ಲವೂ ಜಲಾವೃತವಾಗಿದೆ. ಪ್ರವಾಹಕ್ಕೆ ಹೆದರಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮನೆಯ ಸಾಮಾಗ್ರಿಗಳನ್ನು ಹೇರಿಕೊಂಡು ಗ್ರಾಮ ತೊರೆಯುತ್ತಿರೋ ದೃಶ್ಯಗಳು ಸಾಮನ್ಯವಾಗಿವೆ. ಬಿ ಎಸ್ ಬೇಲೇರಿ ಗ್ರಾಮಕ್ಕೂ ಸಹ ಜಲರಾಕ್ಷಸ ನೆಮ್ಮದಿ ನೀಡಿಲ್ಲ. ಗ್ರಾಮದ ಸುತ್ತಲೂ ಪ್ರವಾಹದ ನೀರು ಆವರಿಸಕೊಳ್ತಿದ್ದು ಅಕ್ಷರಶಃ ಬಿ ಎಸ್ ಬೇಲೇರಿ ಗ್ರಾಮ ನಡುಗಡ್ಡೆಯಾಗಿದೆ. ಇನ್ನು ಈ ಮಧ್ಯೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದ ಬಳಿಯ ಹಳ್ಳದಲ್ಲಿ ಕೊಚ್ವಿ ಹೋಗ್ತಿದ್ದ ಬೈಕ್ ಸವಾರರಿಬ್ಬರನ್ನು ಗ್ರಾಮಸ್ಥರು ಹಗ್ಗದ ಸಹಾಯದಿಂದ ಬೈಕ್ ಸಹಿತ ಕಾಪಾಡಿದ್ದಾರೆ. ಇನ್ನು ನರಗುಂದ ತಾಲೂಕಿನ ಲಕಮಾಪುರ ಹಾಗೂ ಬೂದಿಹಾಳದ ರಸ್ತೆ ಪ್ರವಾಹಕ್ಕೆ ಕೊಚ್ಚಿಹೋಗಿದೆ. ಕೊಣ್ಣೂರು ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಮನೆಗಳೆಲ್ಲವೂ ಜಲಾವೃತವಾಗಿವೆ.‌ ನೀರು ಒಳ ನುಗ್ತಿದ್ದಂತೆ ಜನ್ರೆಲ್ಲಾ ಮನೆ ಖಾಲಿ ಮಾಡಿ ಸುರಕ್ಣಿರ ಸ್ಥಳಕ್ಕೆ ತೆರಳಿದ್ದಾರೆ. ಇನ್ನು ಶಿರಹಟ್ಟಿ ತಾಲೂಕಿನ ಗೋವನಕೊಪ್ಪ ಗ್ರಾಮದ ಜವಳಿ ಹಳ್ಳದಲ್ಲಿ ೬೮ ಕುರಿಗಳು ಕೊಚ್ಚಿ ಹೋಗಿವೆ.‌ ಆದರೆ ವಿಚಿತ್ರ ಹಾಗೂ ಅದೃಷ್ಟ ಅಂದ್ರೆ ಆ ಕುರಿಗಳ ಹಿಂಡಿನಲ್ಲಿ ಎರೆಡೇ ಎರೆಡು ಕುರಿಗಳು ಜೀವ ಉಳಿಸಿಕೊಂಡಿವೆಪ್ಪಾ ಅಂತಾ ಬದುಕುಳಿದು ಪಾರಾಗಿ ಬಂದಿವೆ. ಕುರಿಗಳು ಮಾಲತೇಶ್ ಆಲೂರು ಮತ್ತು ಪ್ರಕಾಶ ಚನ್ನದಾಸರ ಎಂಬವವರಿಗೆ ಸೇರಿದವುಗಳಾಗಿದ್ದು ಶಿರಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಟ್೦೧-ಬುಕ್ಕಿಬಾಯಿ, ನೆರೆ ಸಂತ್ರಸ್ತೆ.

ಬೈಟ್೦೨-ಯಲ್ಲಮ್ಮ, ನೆರೆ ಸಂತ್ರಸ್ತೆ.

Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.