ಗದಗ: ನಗರದಲ್ಲಿ ನಿನ್ನೆ (ಭಾನುವಾರ) ವಿಶ್ವ ಪರಿಸರ ದಿನ ಆಚರಿಸಲಾಯಿತು. ವಿಶ್ವ ಪರಿಸರ ದಿನದ ನಿಮಿತ್ತ ಗದಗ ಜಿಲ್ಲಾಧಿಕಾರಿ ಕಚೇರಿಯಿಂದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದವರೆಗೆ 5 ಕಿ. ಮೀ ವಾಕಥಾನ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ಸಿಇಒ ಸುಶೀಲಾ. ಡಿಎಫ್ಒ ದೀಪಿಕಾ ಬಾಜಪೆ ಸೇರಿ ಹಲವು ಅಧಿಕಾರಿಗಳು, ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಭಾಗಿಯಾಗಿದ್ದರು.
'ಹಸಿರು ನಮ್ಮ ಉಸಿರು' ಎಂಬ ಘೋಷಣೆಯೊಂದಿಗೆ ದಾರಿ ಉದ್ದಕ್ಕೂ ಜಾಗೃತಿ ಮೂಡಿಸಲಾಯಿತು. ಬಳಿಕ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಜಿಲ್ಲಾಧಿಕಾರಿ ಸುಂದರೇಶಬಾಬು ಮತ್ತು ಉಳಿದ ಅಧಿಕಾರಿಗಳು ಸಸಿಗಳನ್ನು ನೆಟ್ಟರು.
ಇದನ್ನೂ ಓದಿ: ಬರಡು ಭೂಮಿಯಲ್ಲಿ ದಟ್ಟ ಅರಣ್ಯ: 40 ಲಕ್ಷ ರೂ ಪಿಂಚಣಿ ಹಣ ವಿನಿಯೋಗಿಸಿ ಮಾದರಿಯಾದ ಪುಟ್ಟಸ್ವಾಮಿ!