ಗದಗ: ಕೊರೊನಾ ವೈರಸ್ಗೆ ಸಾವನ್ನಪ್ಪಿದ 80 ವರ್ಷದ ವೃದ್ಧೆಯ ಮೃತದೇಹದ ಅಂತಿಮ ಸಂಸ್ಕಾರವನ್ನು ಜಿಲ್ಲಾಡಳಿತ ನೆರವೇರಿಸಿದೆ.
ಸೋಂಕಿತ ವೃದ್ಧೆ ಅಂತಿಮ ಸಂಸ್ಕಾರವನ್ನು ನಗರದ ಬೆಟಗೇರಿ ಮುಕ್ತಿಧಾಮದಲ್ಲಿ ನೆರವೇರಿಸಲಾಯಿತು. ಸರ್ಕಾರದ ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ನಿಯಮದ ಪ್ರಕಾರ, ಸಂಬಂಧಿಕರು ಇತರೆ ಅಧಿಕಾರಿ, ಸಿಬ್ಬಂದಿಗಳು ಮೃತದೇಹದ ಬಳಿಗೆ ಬರಲು ಬಿಡುವುದಿಲ್ಲ. ಸರ್ಕಾರದ ಪ್ರೊಟೊಕಾಲ್ ಪ್ರಕಾರ ಶವವನ್ನು ದಹನ (ಸುಡುವ) ಅಥವಾ ಹೂಳಬೇಕಿದೆ.
ಜಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ ಪಿ.ಪಿ.ಇ ಕಿಟ್ ಧರಿಸಿಕೊಂಡು ಆಸ್ಪತ್ರೆಯ ಶ್ರದ್ಧಾಂಜಲಿ ವಾಹನದ ಮೂಲಕ ಮೃತದೇಹವನ್ನು ಮುಕ್ತಿಧಾಮಕ್ಕೆ ರವಾನಿಸಿದ್ದರು.