ಗದಗ : ಬಿಜೆಪಿ ಪಕ್ಷದ ಹಲವರಲ್ಲೆನೇ ಗುಂಪುಗಾರಿಕೆ ನಡೆದಿದೆ. ಸಂಪುಟ ವಿಸ್ತರಣೆ ಆಗುತ್ತೋ, ಬಿಡುತ್ತೋ ಅದರ ಬಗ್ಗೆ ಕಾಂಗ್ರೆಸ್ಗೆ ಗಮನವಿಲ್ಲ. ಜೊತೆಗೆ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಆಸಕ್ತಿಯನ್ನು ಹೊಂದಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೂರ್ಣ ಸರ್ಕಾರ ಆಗದೇ ಬಹಳ ದಿನಗಳಾಯ್ತು. ಜನ ತೊಂದರೆಗೆ ಒಳಗಾಗಿದ್ದಾರೆ. ಮಳೆ, ಬರ, ಪ್ರವಾಹದಿಂದ ತೊಂದರೆ ಆಯಿತು. ಆದರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
16 ಜನ ಸಚಿವರನ್ನು ಇಟ್ಟುಕೊಂಡು ಕೆಲಸ ಮಾಡೋಕಾಗಲ್ಲ. ಸರ್ಕಾರ ಉಳಿಯಬೇಕೆಂದ್ರೆ ಸಚಿವ ಸಂಪುಟ ಪೂರ್ಣವಾಗಬೇಕು. ರಾಜ್ಯದಲ್ಲಿ ಅಡ್ಡಿಯಾಗದಂತಹ ರಾಜಕೀಯ ಸೃಷ್ಟಿ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ, ಸಿಎಲ್ಪಿ ಅಧ್ಯಕ್ಷರ ನೇಮಕ ಕುರಿತು ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರ ಆಯ್ಕೆ ಸದ್ಯಕ್ಕಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗುಣಮುಖರಾಗುತ್ತಿದ್ದಾರೆ. ಅವರು ಆಸ್ಪತ್ರೆಯಿಂದ ಬಂದಮೇಲೆ ಸಂಬಂಧಪಟ್ಟವರನ್ನ ಕರೆಸಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.