ಗದಗ: ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ನಡೆದಿದೆ.
ರೈತ ಫಕ್ಕೀರಸ್ವಾಮಿ ಕಡ್ಲಿ ಎಂಬುವವರು ತಾವು ಬೆಳೆದಿದ್ದ ಅಲಸಂದಿ ಬೆಳೆಯನ್ನು ಕಟಾವು ಮಾಡಿ, ರಸ್ತೆಯ ಮೇಲೆ ಗೂಡು ಹಾಕಿದ್ದರು. ಇನ್ನೇನು ಮಷಿನ್ಗೆ ಹಾಕಿ ರಾಶಿ ಮಾಡಲು ಸಿದ್ಧತೆ ಕೂಡ ನಡೆಸಿದ್ದರು.
ಓದಿ: ಬರಿಗೈನಲ್ಲೇ ಚಿರತೆ ಸೆರೆ ಹಿಡಿದ ಮಂಡ್ಯ ಯುವಕರು: ವೈರಲ್ ವಿಡಿಯೋ
ಆದರೆ, ಆಕಸ್ಮಿಕವಾಗಿಯೋ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.