ಗದಗ: ಭಾರತ್ ಗ್ಯಾಸ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ನಗರದ ಬ್ಯಾಂಕ್ ರಸ್ತೆಯಲ್ಲಿನ ಜನತಾ ಬಜಾರ್ ಎದುರಿಗೆ ಇರುವ ಭಾರತ್ ಗ್ಯಾಸ್ ಏಜೆನ್ಸಿ ಅಂಗಡಿಗೆ ಬೆಂಕಿ ಬಿದ್ದಿದೆ. ಕಳೆದ ಎರಡು ದಿನಗಳಿಂದ ಬಂದ್ ಇದ್ದ ಅಂಗಡಿಯಲ್ಲಿ ನಿನ್ನೆ ಸಂಜೆ ವೇಳೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಉರಿದಿದೆ. ಪರಿಣಾಮ ಅಂಗಡಿಯೊಳಗಿನ ಕಂಪ್ಯೂಟರ್ಗಳು, ದಾಖಲೆ ಪತ್ರಗಳು ಸುಟ್ಟು ಕರಕಲಾಗಿವೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ. ಆದರೆ ಜನಸಂದಣಿಯಿಂದ ತುಂಬಿದ ಪ್ರದೇಶದಲ್ಲಿ ಇರುವ ಈ ಅಂಗಡಿಯಲ್ಲಿ ತುಂಬಿದ ಗ್ಯಾಸ್ ಸಿಲಿಂಡರ್ಗಳಿದ್ದವು. ಅದರಲ್ಲಿ ಕೇವಲ ಒಂದೇ ಸಿಲಿಂಡರ್ಗೆ ಬೆಂಕಿ ತಗುಲಿ ಸ್ಪೋಟಗೊಂಡಿದೆ. ಪರಿಣಾಮ ಅಂಗಡಿಯೊಳಗಿನ ಗಾಜುಗಳು ಪುಡಿ ಪುಡಿಯಾಗಿವೆ. ಆಕಸ್ಮಾತ್ ಉಳಿದ ಎಲ್ಲಾ ಸಿಲಿಂಡರ್ಗಳಿಗೆ ಬೆಂಕಿ ತಗುಲಿ ಸ್ಪೋಟಗೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ಇದನ್ನು ಓದಿ: ಮೊದಲು ಜೀವ ಭದ್ರತೆ, ನಂತರ ಜೀವನದ ಭದ್ರತೆ ; ಕೋವಿಡ್ ತಡೆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ.. ಸುಧಾಕರ್
ಸ್ಥಳೀಯರು ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಶ್ರಮಿಸಿದರು. ಎಂಎಸ್ ಭೂಸ್ತ ಎಂಬವರಿಗೆ ಈ ಅಂಗಡಿ ಸೇರಿದ್ದು, ನಗರ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.