ETV Bharat / state

ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಮುಂದಾದ್ರೆ ಉಗ್ರ ಹೋರಾಟ: ತೋಂಟದ ಶ್ರೀಗಳ ಎಚ್ಚರಿಕೆ - ಗಣಿಗಾರಿಕೆ ಮಾಡಲು ಮುಂದಾದ್ರೆ, ಉಗ್ರ ಹೋರಾಟ

ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತೋಂಟದ ಸಿದ್ದರಾಮ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

Fierce struggle for mining in Kappadgudda Tondara Shri
ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಮುಂದಾದ್ರೆ, ಉಗ್ರ ಹೋರಾಟ: ತೋಂಟದ ಶ್ರೀಗಳ ಎಚ್ಚರಿಕೆ
author img

By

Published : May 23, 2020, 11:25 PM IST

ಗದಗ: ನಿರಂತರವಾಗಿ ಕಪ್ಪತಗುಡ್ಡ ಮೇಲೆ ದಾಳಿ ಆಗುತ್ತಿದೆ, ಆರ್ಥಿಕ ವ್ಯವಸ್ಥೆ ಹಾಳಾಗಿದೆ ಎನ್ನುವುದಕ್ಕೆ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲಾಗುತ್ತದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

ಗದಗ ನಗರದ ತೋಂಟದಾರ್ಯ ಭವನದಲ್ಲಿ ಸಿದ್ಧರಾಮ ಶ್ರೀಗಳು ಮತ್ತು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ‌ಜಂಟಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು. ಗಣಿಗಾರಿಕೆ ಮಾಡಲು ಮುಂದಾದ್ರೆ, ನಾವು ಹೋರಾಟ ಮಾಡುತ್ತೇವೆ. ಈ ಭಾಗದ ಜೀವನಾಡಿಯಾದ ಕಪ್ಪತಗುಡ್ಡವನ್ನು ಸಂರಕ್ಷಣೆ ಮಾಡಬೇಕಾಗಿದೆ. ಪ್ರಕೃತಿ ಮೇಲೆ ಅನಾವಶ್ಯಕವಾಗಿ ಗಣಿಗಾರಿಕೆ ಮಾಡೋದು ಪ್ರಕೃತಿ ಮೇಲೆ ಅತ್ಯಾಚಾರ ಮಾಡಿದ ಹಾಗೆ, ಕಪ್ಪತಗುಡ್ಡವನ್ನು ಹಾಳು ಮಾಡಿದ್ರೆ ಮಳೆಯಾಗದೇ ಈ ಭಾಗ ಬರಡು ಭೂಮಿಯಾಗುತ್ತದೆ.‌

ಅಪಾರ ಪ್ರಮಾಣದ ಔಷಧಗುಣಗಳನ್ನು ಈ ಕಪ್ಪತಗುಡ್ಡ ಹೊಂದಿದೆ.‌ ವಿಂಡ್ ಪವರ್ ಹಾಕಿದ್ದಾರೆ, ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಿವೆ, ನಿರಂತರವಾಗಿ ಕಪ್ಪತಗುಡ್ಡ ಮೇಲೆ ದಾಳಿ ಆಗುತ್ತಿದೆ, ಆರ್ಥಿಕ ವ್ಯವಸ್ಥೆ ಹಾಳಾಗಿದೆ ಎನ್ನುವುದಕ್ಕೆ ಕಪ್ಪತಗುಡ್ಡ ಗಣಿಗಾರಿಕೆ ಮಾಡಲಾಗುತ್ತದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.‌ ಕಮಿಷನ್ ಗೆ ಒಳಗಾಗಿ ಗಣಿಗಾರಿಕೆಮಾಡಲು ಸರ್ಕಾರ ಅವಕಾಶ ಮಾಡಿಕೊಡಬಾರದು, ಸರ್ಕಾರಗಳು ಮುಂದೆ ಬರುವ ಚುನಾವಣೆಗೆ ಹೇಗೆ ಹಣ ಸಂಗ್ರಹಣೆ ಮಾಡಬೇಕು ಅಂತಾ ವಿಚಾರ ಮಾಡ್ತಾರೆ ಆದರೆ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸಮಾಡಬೇಕು.

ಸಂಪನ್ಮೂಲಗಳನ್ನು ಹೋರಾಟದ ಮೂಲಕ ಉಳಿಸಿಕೊಳ್ಳಬೇಕು, ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡದಂತೆ ಎಲ್ಲರೂ ಒಂದಾಗಬೇಕು. ಗಣಿಗಾರಿಕೆ ಮಾಡುವ ಬದಲಾಗಿ, ಕಪ್ಪತಗುಡ್ಡ ಬೆಳೆಸುವ ನಿಟ್ಟಿನಲ್ಲಿ ಕೆಲಸ ಆಗಬೇಕಾಗಿದೆ‌ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.