ETV Bharat / state

ಸೇತುವೆಗಾಗಿ 50 ವರ್ಷಗಳಿಂದ ಸತತ ಹೋರಾಟ.. ಚುನಾವಣೆ ಬಹಿಷ್ಕಾರಕ್ಕೆ ಜನರ ನಿರ್ಧಾರ

ರಸ್ತೆ ನಿರ್ಮಾಣ ಮಾಡಲು ಚುನಾವಣೆ ಬಂದಾಗ ರಾಜಕೀಯ ವ್ಯಕ್ತಿಗಳು ಭರವಸೆ ನೀಡುತ್ತಲೇ ಹೋಗ್ತಿದ್ದಾರೆ. ಆದರೆ, ಇದುವರೆಗೂ ಸೇತುವೆ ನಿರ್ಮಾಣ ಮಾಡಲು‌ ಮುಂದಾಗಿಲ್ಲ. ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಹಲವು ನಾಯಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಈ ಬಗ್ಗೆ ಯಾರೂ ಇತ್ತಕಡೆ ನೋಡಿಲ್ಲ. ನಮ್ಮ ಅಳಲು ಅವರಿಗೆ ಮನವರಿಕೆಯಾಗಿಲ್ಲ. ಎಲ್ಲರೂ ಭರವಸೆ ನೀಡುತ್ತಲೇ ಕಾಲ ಕಳೆಯುತ್ತಿದ್ದಾರೆ..

Farmers who have been fighting constantly for 50 years to build the bridge
ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿರುವ ರೈತರು
author img

By

Published : Oct 23, 2020, 11:37 PM IST

Updated : Oct 23, 2020, 11:45 PM IST

ಗದಗ : ಜಿಲ್ಲೆಯ ಕಡೆಯ ಹಳ್ಳಿಯೊಂದು ಅಭಿವೃದ್ಧಿ ಕಾಣದೇ ದಶಕಗಳೇ ಕಳೆದಿವೆ. ರೈತಾಪಿ ವರ್ಗವಿರುವ ಈ ಗ್ರಾಮದಲ್ಲಿ ಅಭಿವೃದ್ಧಿಯಾಗದ ರಸ್ತೆ ಹಾಗೂ ನಿರ್ಮಾಣವಾಗದ ಸೇತುವೆಯ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯನ್ನು ಮನೆಗೂ ತರದ ಸ್ಥಿತಿಯಲ್ಲಿರುವ ಈ ಗ್ರಾಮಕ್ಕೆ ಇಷ್ಟುದಿಗಳ ಕಾಲ ಕಾಯಕಲ್ಪ ನೀಡದಿರುವುದು ರೈತಾಪಿ ವರ್ಗವನ್ನು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

ಒಂದು ಸೇತುವೆ ನಿರ್ಮಾಣವಾದರೆ ಸಾಕು ಎಂಬ ಅರೆ ಕಾಸಿನ ಆಸೆಗಾಗಿ 50 ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿರುವ ಜಿಲ್ಲೆಯ ತಿಮ್ಮಾಪುರ ಗ್ರಾಮದ ಜನರಿಗೆ ಈವರೆಗೂ ಅದು ಈಡೇರಿಲ್ಲ. ಬೇರೆ ದಾರಿ ಕಾಣದೇ ತಾವು ಬೆಳೆದ ಬೆಳೆಯನ್ನು ಹೊಲದಲ್ಲೇ ಬಿಟ್ಟು ಬರುವ ಸ್ಥಿತಿಗೆ ಬಂದು ನಿಂತಿರುವ ಗ್ರಾಮದ ಜನ, ರಾಜಕೀಯ ನಾಯಕರ ನಿರ್ಲಕ್ಷ್ಯತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಒಂದು ದಿನದ ಸಮಸ್ಯೆಯಲ್ಲ, ಸುಮಾರು 50 ವರ್ಷಗಳಿಂದ ಇದೇ‌ ರೀತಿಯ ಸಮಸ್ಯೆಯನ್ನು ಎದುರಿಸಿಕೊಂಡು ಬರುತ್ತಿದ್ದಾರೆ.

ಒಂದು ಸೇತುವೆ ನಿರ್ಮಾಣಕ್ಕೆ ಸುಮಾರು 50 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಮತಗಿ ಗ್ರಾಮದಿಂದ ಕೋಟಮಚಗಿ ಮತ್ತು ರೋಣಕ್ಕೆ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಎರಡು ದೊಡ್ಡ ಕಂದಕಗಳಿದ್ದು ಅವುಗಳಲ್ಲಿಯೇ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ. ಬಹುತೇಕ ರೈತರಿವ ಈ ಗ್ರಾಮದಲ್ಲಿ ತಮ್ಮ ಹೊಲ-ಗದ್ದೆಗಳಿಗೆ ಹೋಗಲು, ಬೆಳೆದ ಕಾಳುಗಳನ್ನು ಮನೆಗೆ ತರಲು ಪರದಾಡುತ್ತಿದ್ದಾರೆ.

ಸದ್ಯ ಮಳೆಗಾಲ ಇದ್ದುದರಿಂದ ಬೆಳೆದ ಬೆಳೆಗಳನ್ನು ಜಮೀನಿನಲ್ಲಿಯೇ ಬಿಟ್ಟಿದ್ದಾರೆ. ಗೋವಿನ ಜೋಳ, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಬೆಳೆ ಹೀಗೆ... ನಾನಾ ಬೆಳೆಗಳನ್ನ ಅಲ್ಲಿಯೇ ಕೊಳೆಯುತ್ತಿವೆ. ಲಕ್ಷಾಂತರ ರೂ. ಆದಾಯ ಬರಬೇಕಿದ್ದ ರೈತನಿಗೆ ಒಂದು ಸೇತುವೆ ನಿರ್ಮಾಣವಾಗದಿರುವುದರಿಂದ ಹಾಗೂ ರಸ್ತೆ ಸಂಪೂರ್ಣ ಕೆಟ್ಟುಹೋಗಿರುವುದರಿಂದ ಈ ಎಲ್ಲ ನಷ್ಟ ಅನುಭವಿಸುತ್ತಿದ್ದೇವೆ.

ವಾಹನಗಳು, ಎತ್ತಿನ ಬಂಡಿ ಸಂಚಾರಕ್ಕೆ ಅನುಕೂಲ ಇಲ್ಲದ್ದರಿಂದ ಹಲವು ರೈತರು ತಾವು ಬೆಳೆದ ಬೆಳೆಗಳನ್ನು ಅಲ್ಲಿಯೇ ಬಿಡುತ್ತಿದ್ದಾರೆ. ರಾಶಿ ಮಾಡಿದರೂ ಕಷ್ಟ. ಮಾಡದಿದ್ದರೂ ಕಷ್ಟ. ಕೂಲಿ ಆಳುಗಳಿಗೆ ಕೂಲಿ ಕೊಟ್ಟು ರಾಶಿ ಮಾಡಿದರೆ ಅದನ್ನ ಮನೆಗೆ ತೆಗೆದುಕೊಂಡು ಹೋಗುವಂತಹ ಸ್ಥಿತಿ ನಮ್ಮದಾಗಿದೆ ಎಂದು ಸ್ಥಳೀಯರ ರೈತರು ತನ್ನ ನೋವು ತೋಡಿಕೊಂಡಿದ್ದಾರೆ.

ರಸ್ತೆ ನಿರ್ಮಾಣ ಮಾಡಲು ಚುನಾವಣೆ ಬಂದಾಗ ರಾಜಕೀಯ ವ್ಯಕ್ತಿಗಳು ಭರವಸೆ ನೀಡುತ್ತಲೇ ಹೋಗ್ತಿದ್ದಾರೆ. ಆದರೆ, ಇದುವರೆಗೂ ಸೇತುವೆ ನಿರ್ಮಾಣ ಮಾಡಲು‌ ಮುಂದಾಗಿಲ್ಲ. ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಹಲವು ನಾಯಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಈ ಬಗ್ಗೆ ಯಾರೂ ಇತ್ತಕಡೆ ನೋಡಿಲ್ಲ.

ನಮ್ಮ ಅಳಲು ಅವರಿಗೆ ಮನವರಿಕೆಯಾಗಿಲ್ಲ. ಎಲ್ಲರೂ ಭರವಸೆ ನೀಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ ಈ ಸಾರಿ ಅದು ಮುಂದುವರೆಯಬಾರದು ಎಂಬ ಕಾರಣಕ್ಕೆ ಬರುವ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನೊಂದ ರೈತರು.

ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿರುವ ರೈತರು

ಇನ್ನು ಈ ಮಾರ್ಗ ಸುಮಾರು 12 ಕಿ.ಮೀ ದೂರದಲ್ಲಿದೆ. ಗ್ರಾಮದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಈ ಸೇತುವೆ ನಿರ್ಮಾಣವಾದರೆ ಈ ಭಾಗದ ರೈತರ ಬಾಳು ಬಂಗಾರವಾಗಲಿದೆ. ಅವರ ಕಷ್ಟವನ್ನು ಸರ್ಕಾರ ಹಾಗೂ ಈ ಭಾಗದ ಶಾಸಕರು ಅರಿತು ಸೇತುವೆ ನಿರ್ಮಾಣ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ ಮಾಡೋದರಲ್ಲಿ ಅನುಮಾನವಿಲ್ಲ.

Last Updated : Oct 23, 2020, 11:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.