ETV Bharat / state

VIDEO : ಟ್ರ್ಯಾಕ್ಟರ್ ಮೂಲಕ ಮೂರು ಎಕರೆ ಹೂವಿನ ಬೆಳೆ ನಾಶ ಮಾಡಿದ ರೈತ - ಕಿರಣಗೌಡ‌ ಬಂಡಿ ಎಂಬ ರೈತ

ಸರ್ಕಾರ ನೀಡುತ್ತಿರುವ ಹತ್ತು ಸಾವಿರ ರೂಪಾಯಿ ಆಳುಗಳ ಖರ್ಚನ್ನೂ ಸಹ ನೀಗಿಸುತ್ತಿಲ್ಲ. ಹೀಗಿದ್ದಾಗ, ಸಾಲ-ಸೂಲ ಮಾಡಿ ಬೆಳೆದ ನಮ್ಮ ಪಾಡು ಯಾರಿಗೆ ಹೇಳೋಣ. ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಪರಿಹಾರ ಮೊತ್ತ ‌ನೀಡಲಿ ಎಂದು ಆಗ್ರಹಿಸಿದ್ದಾರೆ ನಷ್ಟಕ್ಕೊಳಗಾದ ರೈತ ಕಿರಣಗೌಡ..

flower crop by tractor in gadaga
ಹೂವಿನ ಬೆಳೆ ನಾಶ ಮಾಡಿದ ರೈತ
author img

By

Published : Jun 8, 2021, 10:15 PM IST

ಗದಗ : ಕೊರೊನಾ ಲಾಕ್​​ಡೌನ್ ಹಿನ್ನೆಲೆ ಹೂ ಬೆಳೆದ ರೈತರು ಸಂಕಷ್ಟ ಎದುರಿಸುತ್ತಿದ್ದು, ಸಾಕಷ್ಟು ಹಾನಿಗೊಳಗಾಗಿದ್ದಾರೆ. ಈ ಹಿನ್ನೆಲೆ ರೈತನೊಬ್ಬ ಟ್ರ್ಯಾಕ್ಟರ್ ಮೂಲಕ ತಾನು ಬೆಳೆದ ಹೂವಿನ ಬೆಳೆಯನ್ನು ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಹೂವಿನ ಬೆಳೆ ನಾಶ ಮಾಡಿದ ರೈತ..

ಓದಿ: COVID update: ರಾಜ್ಯದಲ್ಲಿಂದು 10 ಸಾವಿರಕ್ಕಿಂತ ಕಡಿಮೆ ಕೇಸ್​ಗಳು ಪತ್ತೆ, 179 ಸೋಂಕಿತರು ಸಾವು

ಗದಗ ತಾಲೂಕಿನ ಸಂಭಾಪೂರ ಗ್ರಾಮದ ಕಿರಣಗೌಡ‌ ಬಂಡಿ ಎಂಬ ರೈತ ತನ್ನ ಮೂರು ಎಕರೆ ಹೊಲದಲ್ಲಿ ಸೇವಂತಿ ಹೂವಿನ ಬೆಳೆ ಬೆಳೆದಿದ್ದು, ಅದಕ್ಕೆ ಸುಮಾರು 3 ಲಕ್ಷ ರೂಪಾಯಿವರೆಗೂ ಖರ್ಚು ಮಾಡಿ ಕೈ ಸುಟ್ಟುಕೊಂಡಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಹೂವಿನ ಬೆಲೆ ಸಹ ನೆಲಕಚ್ಚಿದ್ದು, ಯಾರೂ ಕೇಳದ ಹಾಗೆ ಆಗಿದೆ. ಇದರಿಂದ ಕಿರಣಗೌಡ ಬೇಸರವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು, ಸರ್ಕಾರ ನೀಡುತ್ತಿರುವ ಹತ್ತು ಸಾವಿರ ರೂಪಾಯಿ ಆಳುಗಳ ಖರ್ಚನ್ನೂ ಸಹ ನೀಗಿಸುತ್ತಿಲ್ಲ. ಹೀಗಿದ್ದಾಗ, ಸಾಲ-ಸೂಲ ಮಾಡಿ ಬೆಳೆದ ನಮ್ಮ ಪಾಡು ಯಾರಿಗೆ ಹೇಳೋಣ. ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಪರಿಹಾರ ಮೊತ್ತ ‌ನೀಡಲಿ ಎಂದು ಆಗ್ರಹಿಸಿದ್ದಾರೆ ಕಿರಣಗೌಡ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.