ಗದಗ: ಜನ ಕಾಂಗ್ರೆಸ್ ಪಕ್ಷವನ್ನು ಹೊಡೆದು ಹೊರ ಹಾಕಿದ್ದಾರೆ. ಹೊಡೆಯೋದು ಅಂದ್ರೆ ಕೈಯಿಂದಲೇ ಆಗಬೇಕಿಲ್ಲ, ಅಧಿಕಾರದಿಂದ ಹೊಡೆದು ಹೊರಹಾಕಿದ್ದಾರೆ ಅಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಗದಗನ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವ್ರು, ಜನರಿಗೆ ಅವ್ರನ್ನು ಹೊಡೀಬೇಡಿ ಅಂತೀನಿ, ಅವರನ್ನು ಮತದಾನದಲ್ಲೇ ಹೊಡೆದು ಹೊರಹಾಕಿದ್ದೀರಿ. 15 ಸೀಟು ಬಂದಾಗ ಬಿಜೆಪಿಗೆ ಅಧಿಕಾರ ಕೊಟ್ಟು ಮತ್ತೆ ಕಾಂಗ್ರೆಸ್ ಜೆಡಿಎಸ್ ನ್ನು ಹೊರಹಾಕ್ತೀರಿ. ಇನ್ನು ಮೂರು ವರ್ಷ ಬಿಜೆಪಿ ಅಧಿಕಾರದಲ್ಲಿರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹುಲಿಯಾ ಎನ್ನೋ ಶಬ್ದ ಬಳಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ದೀಪ ಆರಿ ಹೋಗೋ ಸಂದರ್ಭದಲ್ಲಿ ಭಾರಿ ಸದ್ದು ಮಾಡುತ್ತೆ. ಯಾರೋ ಓರ್ವ ಕುಡಿದಿದ್ದ, ಕುಡಿದ ಸಂದರ್ಭದಲ್ಲಿ ಆ ಪದ ಬಳಸಿದ. ಕುಡಿಯೋನು ಬಿಟ್ರೆ ಬೇರೆ ಯಾರು ಆ ಪದ ಬಳಸ್ತಾರೆ ಅಂತ ಪ್ರಶ್ನಿಸಿದ್ರು.
ಕುಡುಕು ಏನೋ ಅಂದ ಅಂತ ಆನಂದ ಪಟ್ರೆ ಪಡಲಿ ಬಿಡಿ, ಅವರು ಆನಂದವಾಗಿ ಎಷ್ಟು ದಿನ ಇರ್ತಾರೆ ಇರಲಿ ಎಂದ ಈಶ್ವರಪ್ಪ, ನಾನು ಕುರುಬ ನಾಯಕನಲ್ಲ, ನಾನು ಸಾಮಾನ್ಯ ಕಾರ್ಯಕರ್ತ. ಜನರ ಜೊತೆ ಇರೋನು, ಯಾವುದೇ ಜಾತಿ ನಾಯಕ ಅಂತ ಹೇಳ್ಕೊಂಡಿಲ್ಲ, ಮುಂದೆಯೂ ಹೇಳ್ಕೊಳಲ್ಲ. ಸ್ವಾಮೀಜಿಗಳ ಆಶೀರ್ವಾದದಿಂದ ಈ ಬಾರಿ ಬಿಜೆಪಿ ಪೂರ್ಣ ಬಹುಮತದ ಆಡಳಿತ ನಡೆಸುತ್ತೆ. ಹಿಂದೆ ಬಹುಮತ ಬಂದಿರಲಿಲ್ಲ, ಆಗ ಪಕ್ಷೇತರರು ಬೆಂಬಲಿಸಿದ್ದರು ಅಂತ ಹೇಳಿದ್ರು.
ಇದೇ ವೇಳೆ ಮಾಜಿ ಸಚಿವ ಡಿಕೆಶಿಯವರು ಬಿಜೆಪಿ 15 ಸೀಟನ್ನು ಗೆಲ್ಲುತ್ತದೆ ಎಂದು ವ್ಯಂಗ್ಯವಾಡಿದ ಕುರಿತು ಟಾಂಗ್ ಕೊಟ್ಟ ಸಚಿವ ಈಶ್ವರಪ್ಪ ಅವರು, ದೇವೇಗೌಡ್ರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಪಾರ್ಲಿಮೆಂಟ್ ಚುನಾವಣೆ ಮುನ್ನ ಬಿಜೆಪಿ ಎರಡು ಸೀಟೂ ಗೆಲ್ಲಲ್ಲ ಅಂದಿದ್ರು. ಆದ್ರೆ ಕಾಂಗ್ರೆಸ್ ಆಗ್ಲಿ, ಜೆಡಿಎಸ್ ಆಗ್ಲಿ, ಎರಡೆರಡು ಸೀಟು ಗೆದ್ರಾ, ಗೆದ್ದಿದ್ದು ಒಂದೊಂದೇ ಸೀಟು. ಈಗ ಮತ್ತೆ ಅವರು ಹಾಗೆ ಹೇಳ್ತಾನೇ ಇರಲಿ, ಜನ ನಮ್ಮನ್ನು ಗೆಲ್ಲಿಸ್ತಾನೆ ಇರ್ತಾರೆ. 22 ಅಂತ ಹೆಳ್ಕೊಳ್ಳೋಕೆ ನಾವೇ ಸಂಕೋಚ ಪಡ್ತಿದ್ವಿ, ಆದ್ರೆ ಜನ 25 ಸೀಟು ಕೊಟ್ರು. ಕಾಂಗ್ರೆಸ್, ಜೆಡಿಎಸ್ ನವರ ವ್ಯಂಗ್ಯ ನಾಳೆ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತೆ ಎಂದ್ರು.