ಗದಗ: ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿಗಾಗಿ ಜನ ಪರಡುವ ಸ್ಥಿತಿಯಿದೆ. ಕಿಲೋ ಮೀಟರ್‌ನಷ್ಟು ದೂರ ಸಾಗಿ ತಳ್ಳುವ ಗಾಡಿ ಮೂಲಕ ನೀರು ತರುತ್ತಿದ್ದರು. ಆದರೆ, ಈಗ ಆ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಜನರ ಮುಖದಲ್ಲಿ ಸಂತಸ ಮೂಡಿದೆ.
ಮೊದಲ ಬಾರಿಗೆ ಕುಮಾರಸ್ವಾಮಿ ಸಿಎಂ ಆದಾಗ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ರು. ಗ್ರಾಮಸ್ಥರಿಗೆ ಹಲವಾರು ಭರವಸೆಗಳನ್ನು ನೀಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಆದರೆ, ಈವರೆಗೂ ಯಾವೊಂದೂ ಭರವಸೆ ಈಡೇರಿಲ್ಲ. ಕುಡಿಯುವ ನೀರಿಗಾಗಿ ಜನ ತತ್ತರಿಸಿದ್ದರು. ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು.
ಅದಾದ ಕೆಲವೇ ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರು ಗ್ರಾಮದ ಪ್ರತಿ ಮನೆ ಬಾಗಿಲಿಗೂ ವಾರದಲ್ಲಿ ಎರೆಡು ಬಾರಿ ನೀರು ಕೊಡೋಕೆ ಮುಂದೆ ಬಂದಿದ್ದಾರೆ. ಅಲ್ಲದೇ ಧರ್ಮಸ್ಥಳದ ಪೂಜ್ಯ ಡಾ.ವೀರೇಂದ್ರ ಹೆಗ್ಡೆಯವರೂ ಸಹ ಈ ಸಮಸ್ಯೆಗೆ ಸ್ಪಂದಿಸಿ ಗ್ರಾಮದಲ್ಲಿ ಶುದ್ಧ ಹಾಗೂ ಸಮರ್ಪಕ ಕುಡಿಯೋ ನೀರಿನ ಘಟಕ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಧರ್ಮಸ್ಥಳದಲ್ಲೇ ನೀರಿನ ಸಮಸ್ಯೆ ಉಂಟಾಗಿದೆ. ಹೀಗಿದ್ದರೂ ಹೆಗ್ಡೆಯವರು ತಮ್ಮ ಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿರೋದು ಇಲ್ಲಿನ ಜನರಲ್ಲಿ ಖುಷಿ ತಂದಿದೆ. ವಿಪರ್ಯಾಸ ಅಂದ್ರೆ ಸುದ್ದಿ ಬಿತ್ತರವಾದ್ರೂ ಸಹ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ.