ETV Bharat / state

'ಯಡಿಯೂರಪ್ಪರಿಂದಲೇ ಬೆಳೆದು ಈಗ ಅವರ ವಿರುದ್ಧವೇ ಯತ್ನಾಳ ಕತ್ತಿ ಮಸೆಯುತ್ತಿದ್ದಾರೆ' - ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿ‌ಂಗಾಲೇಶ್ವರ ಶ್ರೀ

ಮಾಜಿ ಸಿಎಂ ಯಡಿಯೂರಪ್ಪರಿಂದಲೇ ಬೆಳೆದು ಈಗ ಅವರ ವಿರುದ್ಧವೇ ಯತ್ನಾಳ ಕತ್ತಿ ಮಸೆಯುತ್ತಿದ್ದಾರೆ ಎಂದು ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.

Dingaleswara spoke to the media in Gadag
ಶಿರಹಟ್ಟಿಯ ಫಕೀರ್ ಮಠದ ದಿ‌ಂಗಾಲೇಶ್ವರ ಶ್ರೀ
author img

By

Published : Apr 19, 2022, 8:03 PM IST

ಗದಗ: ಶಿರಹಟ್ಟಿಯ ಫಕೀರ್ ಮಠದ ದಿ‌ಂಗಾಲೇಶ್ವರ ಶ್ರೀಗಳು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಯತ್ನಾಳ ವಿರುದ್ಧ ಕಿಡಿಕಾರಿದ್ದು, ಮಾಜಿ ಸಿಎಂ ಯಡಿಯೂರಪ್ಪರಿಂದಲೇ ಬೆಳೆದು, ಈಗ ಅವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ ಎಂದಿದ್ದಾರೆ.

'ಮಾಜಿ ಸಿಎಂ ಯಡಿಯೂರಪ್ಪ ಪರ ನಿಂತಿದ್ದು ಸತ್ಯ. ಯಾವ ಕಾರಣಕ್ಕಾಗಿ ಅವ್ರನ್ನು ಪದಚ್ಯುತಿ ಮಾಡ್ತೀರಿ ಅಂತ ಅಂದು ಪ್ರಶ್ನಿಸಿದ್ವಿ. ಜೊತೆಗೆ ಯಡಿಯೂರಪ್ಪ ಕೆಳಗಿಳಿಸಲು ಕಾರಣ ಕೇಳಿದ್ದೇವೆ. ಈ ರಾಜ್ಯಕ್ಕೆ ಅವರ ಕೊಡುಗೆ ಬಹಳ ಇದೆ. ಹೀಗಾಗಿಯೇ ಅವತ್ತು 500 ಮಠಾಧೀಶರನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದು ರಾಜ್ಯಕ್ಕೆ ಗೊತ್ತಿದೆ. ಅಂದು ಯಡಿಯೂರಪ್ಪರನ್ನು ಬೆಂಬಲಿಸಿದ್ದರ ಫಲವಾಗಿ ಇಂದು ಲಿಂಗಾಯತ ಸಿಎಂ ಆಗಿ ಉಳಿಕೊಂಡಿದ್ದಾರೆ ಅನ್ನೋದು ಸಮಾಜ ಅರ್ಥ ಮಾಡುಕೊಳ್ಳಲಿ‌ ಎಂದು ಹೇಳಿದರು.

ದಿಂಗಾಲೇಶ್ವರ ಶ್ರೀಗಳು ಅನ್ಯಾಯದ ವಿರುದ್ಧ ಹೋರಾಟ ಮಾಡ್ತಾರೆಯೇ ಹೊರತು ಸ್ವಾರ್ಥವಿಲ್ಲ. ನಮ್ಮ ಹೋರಾಟ ಹತ್ತಿಕ್ಕುವುದು ನಿಮ್ಮಿಂದ ಅಸಾಧ್ಯ. ನಾನು ಗೌರವಾನ್ವಿತ ಸನ್ಯಾಸಿ, ಮಠಾಧಿಪತಿ ಇದ್ದೇನೆ. ಏನ್ ಮಾತನಾಡಬೇಕು ಅನ್ನೋ ಅರಿವು ನನಗಿದೆ ಎಂದರು.

ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ಬಿಎಸ್​​ವೈ ಪರ ಮಾತನಾಡಿದ್ದಕ್ಕೆ ವಿಜಯೇಂದ್ರ ಎಷ್ಟು ಕಮೀಷನ್​​ ನೀಡಿದ್ದಾರೆ?: ಯತ್ನಾಳ್

ನಾನು ಇಷ್ಟೆಲ್ಲಾ ಮಾತಾಡಿದ್ದು ಉತ್ತರ ಕರ್ನಾಟಕದ ಬಗ್ಗೆ ಅನ್ನೋ ಪರಿಜ್ಞಾನ ಯತ್ನಾಳಗೆ ಇರಬೇಕು. ಯಾವ ಯಡಿಯೂರಪ್ಪರಿಂದ ಯತ್ನಾಳ ಬೆಳೆದ್ರೋ, ಅದೇ ಯಡಿಯೂರಪ್ಪ ವಿರುದ್ಧ ಯತ್ನಾಳ ಕತ್ತಿ ಮಸೀತಿಯಿದ್ದಾರೆ. ಇದು ಇಡೀ ರಾಜ್ಯಕ್ಕೆ ಗೊತ್ತಿದೆ. ಯತ್ನಾಳ ತತ್ವ ಸಿದ್ಧಾಂತ, ವ್ಯಕ್ತಿತ್ವ ಯಡಿಯೂರಪ್ಪ ಅವ್ರ ವ್ಯಕ್ತಿತ್ವ, ದಿಂಗಾಲೇಶ್ವರ ಶ್ರೀಗಳ ವ್ಯಕ್ತಿತ್ವ ಇಡೀ ರಾಜ್ಯಕ್ಕೆ ಗೋತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.