ETV Bharat / state

ಗದಗ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಬಂದ್.. ಚಿಕಿತ್ಸೆ ಸಿಗದೇ ಕಿಡ್ನಿ ಫೇಲ್ಯೂರ್ ರೋಗಿಗಳ ನರಳಾಟ - Kidney Failure Patients Cannot Get Dialysis Treatment in gims hospital gadag

ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಡಯಾಲಿಸಿಸ್ ಕೇಂದ್ರವನ್ನು ಬಂದ್ ಮಾಡಲಾಗಿದ್ದು, ಡಯಾಲಿಸಿಸ್ ಗೆ ಬರುವ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.

dialysis-center-closed-at-gadag-jims-hospital
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಬಂದ್...! ಕಿಡ್ನಿ ಫೇಲ್ಯೂರ್ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಸಿಗದೇ ನರಳಾಟ...!
author img

By

Published : Apr 2, 2022, 8:03 AM IST

Updated : Apr 2, 2022, 2:30 PM IST

ಗದಗ : ಇಲ್ಲಿನ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಡಯಾಲಿಸಿಸ್ ಕೇಂದ್ರವನ್ನು ಬಂದ್ ಮಾಡಲಾಗಿದೆ. ಡಯಾಲಿಸಿಸ್ ಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಗದಗ ತಾಲೂಕಿನ ಕಳಸಾಪುರ ಗ್ರಾಮದ ಬದ್ಲವ್ವಾ ಲಮಾಣಿ ಎನ್ನುವ ಮಹಿಳೆ ಕಳೆದ ಒಂದು ವಾರದಿಂದ ಡಯಾಲಿಸಿಸ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಇಂದು ಬಾ, ನಾಳೆ ಬಾ ಅಂತ ಆಕೆಯನ್ನು ಅಲೆದಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗದಗ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಬಂದ್

ಮಾರ್ಚ್ 31ರಂದು ಡಯಾಲಿಸಿಸ್ ಗೆಂದು ಮಹಿಳೆಯು ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ 24 ಗಂಟೆ ಕಳೆದರೂ ಇವರಿಗೆ ಡಯಾಲಿಸಿಸ್ ಮಾಡಿಲಾಗಿಲ್ಲ. ಡಯಾಲಿಸಿಸ್ ವಿಭಾಗದ ಮುಂದೆ ಮಹಿಳೆ ನರಳುತ್ತಾ ಇದ್ರೂ ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೇಳಿದಾಗ ಯಂತ್ರ ದುರಸ್ತಿಯಾಗಿಲ್ಲ ಎಂದು ಚಿಕಿತ್ಸೆ ನೀಡದೇ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಬಡವರಾಗಿರೋ ನಾವು ಖಾಸಗಿ ಆಸ್ಪತ್ರೆಯ ದುಬಾರಿ ಹಣವನ್ನು ಪಾವತಿಸಲು ಸಾಧ್ಯವಿಲ್ಲ. ಇಲ್ಲಿ ನೋಡಿದ್ರೆ ಯಾರೂ ನಮ್ಮ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಡಯಾಲಿಸಿಸ್ ಸಿಗದಿದ್ದರಿಂದ ಉಸಿರಾಟದ ತೊಂದರೆ ಉಲ್ಬಣವಾಗುತ್ತಿದೆ. ನಾನು ಸತ್ತೇ ಹೋಗ್ತಿನಿ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.

ಜಿಮ್ಸ್ ಆಸ್ಪತ್ರೆ ಡಯಾಲಿಸಿಸ್ ಯಂತ್ರಗಳಲ್ಲಿ ವಿದ್ಯುತ್ ಹರಿದು ರೋಗಿಗಳಿಗೆ ತೊಂದರೆಯಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಾರ್ಚ್ 23ರಂದು ಹಾಗೂ 25ರಂದು ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡೋ ವೇಳೆ ಡಯಾಲಿಸಿಸ್ ಯಂತ್ರದಲ್ಲಿ ವಿದ್ಯುತ್ ಪ್ರಸರಣ ಆಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಡಯಾಲಿಸಿಸ್ ವೇಳೆ ಶಾಕ್ ಹೊಡೆದಂತಾಗುತ್ತದೆ ಎಂದು ರೋಗಿಗಳು ಹೇಳಿದ್ದಾರಂತೆ. ಈ ಬಗ್ಗೆ ಡಯಾಲಿಸಿಸ್ ವಿಭಾಗ ಸಿಬ್ಬಂದಿ ಜಿಮ್ಸ್ ನಿರ್ದೇಶಕ ಡಾ. ಪಿ ಎಸ್ ಭೂಸರೆಡ್ಡಿ, ಆಡಳಿತಾಧಿಕಾರಿ ಡಾ. ಮ್ಯಾಗೇರಿ, ಡಾ. ಜಿ ಎಸ್ ಪಲ್ಲೇದ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಇವರು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಆರೋಪಗಳಿವೆ.

ಆದರೆ, ರೋಗಿಗಳು ವಿದ್ಯುತ್ ಹರಿದು ಸಾವನ್ನಪ್ಪಿಲ್ಲ, ಬದಲಾಗಿ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿರೋದಾಗಿ ವೈದ್ಯರು ಮೃತರ ಕುಟುಂಬಸ್ಥರಿಗೆ ಹೇಳಿ ಕಳಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮುಂದೆ ಮತ್ತೆ ಉಳಿದ ರೋಗಿಗಳಿಗೆ ಜೀವಕ್ಕೆ ಹಾನಿಯಾಗಬಾರದು ಅಂತ ಯಂತ್ರಗಳನ್ನ ಬಂದ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಿಮ್ಸ್ ಆಡಳಿತಾಧಿಕಾರಿ ಜಿಎಸ್ ಪಲ್ಲೇದ ಆಗಿರೋ ಯಡವಟ್ಟನ್ನ ಮುಚ್ಚಿಡೋ ಪ್ಯಯತ್ನ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಯಂತ್ರಗಳಲ್ಲಿ ವಿದ್ಯುತ್ ಬರುತ್ತಿರುವುದು ನಿಜ, ರೋಗಿಗಳು ವಿದ್ಯುತ್ ಶಾಕ್ ತಗುಲಿದಂತಾಗುತ್ತಿದೆ ಎಂದು ಹೇಳುತ್ತಿದ್ದರು. ಆದರೆ ಯಾವ ರೋಗಿಗಳು ವಿದ್ಯುತ್ ತಗುಲಿ ಸಾವನ್ನಪ್ಪಿಲ್ಲ, ಬದಲಾಗಿ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.

ರೋಗಿಗಳು ಯಂತ್ರದ ದೋಷದಿಂದ ಸಾವನ್ನಪ್ಪಿದ್ದಾರೋ ಅಥವಾ ಬೇರಾವೊದೋ ಕಾರಣಕ್ಕೆ ಸಾವನ್ನಪ್ಪಿದ್ದಾರೋ ಅನ್ನೋ ಬಗ್ಗೆ ತನಿಖೆ ಮಾಡಬೇಕಷ್ಟೇ. ಜೊತೆಗೆ ದೋಷಪೂರಿತ ಯಂತ್ರಗಳನ್ನ ಸರಿಪಡಿಸಿ ಇರೋ ರೋಗಿಗಳಿಗಾದರೂ ಡಯಾಲಿಸಿಸ್ ಮಾಡಿ ಅವರ ಜೀವವನನ್ನಾದರೂ ಬದುಕಿಸುವಂತೆ ಒತ್ತಾಯ ಕೇಳಿಬರುತ್ತಿದೆ.

ಓದಿ : 2 ವರ್ಷಗಳ ಬಳಿಕ ಕೊಡಗಿನ ಟಿಬೆಟ್ ಕ್ಯಾಂಪ್ ಓಪನ್.. ಪ್ರವಾಸಿಗರ ನಂಬಿ ಬದುಕು ಕಟ್ಟಿಕೊಂಡವರಿಗೆ ಹರ್ಷ

Last Updated : Apr 2, 2022, 2:30 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.