ಗದಗ: ನಗರದ ಕೋ ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ಖರೀದಿ ಕೇಂದ್ರದಲ್ಲಿ ಗ್ರೇಡಿಂಗ್ ನೆಪವೊಡ್ಡಿ ರೈತರು ತಂದಿದ್ದ ಹತ್ತಿಯನ್ನು ಖರೀದಿಸದೆ ವಾಪಸ್ ಕಳುಹಿಸಲಗಿದೆ ಎಂದು ರೈತರು ಆರೋಪಿಸಿದ್ದಾರೆ.
ಗದಗ, ನರಗುಂದ ಹಾಗೂ ರೋಣ ತಾಲೂಕಿನ ರೈತರು ತಂದಿದ್ದ ಹತ್ತಿ, ಮೂರು ದಿನಗಳಿಂದ ಟ್ರ್ಯಾಕ್ಟರ್ನಲ್ಲೇ ಇದೆ. ಇತ್ತ ರೈತರು ಅನ್ನ ನೀರಿಲ್ಲದೇ ಪರದಾಡುತ್ತಿರುವ ಸ್ಥಿತಿಯೂ ನಿರ್ಮಾಣವಾಗಿದೆ.
ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಲ್ಲಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹತ್ತಿ ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.