ಗದಗ: ಕೊರೋನಾ ವೈರಸ್ ಭೀತಿ ಹಿನ್ನೆಲೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ 53 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ.
ಜಿಲ್ಲೆಯ ನರಗುಂದಕ್ಕೆ 11 ಮಂದಿ, ರೋಣಕ್ಕೆ 3 ಮಂದಿ, ಶಿರಹಟ್ಟಿಗೆ 15 ಮಂದಿ, ಮುಂಡರಗಿಗೆ 04 ಮಂದಿ ಹಾಗೂ ಗದಗಕ್ಕೆ 20 ಜನರು ವಿದೇಶದಿಂದ ಜಿಲ್ಲೆಗೆ ಬಂದಿದ್ದಾರೆ. ಆ ಪೈಕಿ 11 ಜನರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದ್ದು, ಮೂವರು ಜಿಮ್ಸ್ ಆಸ್ಪತ್ರೆಯ ಕರೋನಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 8 ಜನರ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಸದ್ಯ ಆ ಪೈಕಿ ನಾಲ್ಕು ಜನರದ್ದು ನೆಗೆಟಿವ್ ಬಂದಿವೆ. ಇನ್ನೂ ನಾಲ್ಕು ಜನರದ್ದು ವರದಿ ಬರಬೇಕಾಗಿದ್ದು, ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.