ಗದಗ: ಜ್ವರ ಹಾಗೂ ಕೆಮ್ಮಿನಿಂದ ನರಳುತ್ತಿದ್ದು ಕೊರೊನಾ ಶಂಕಿತ ಮಾನಸಿಕ ಅಸ್ವಸ್ಥ ವೃದ್ಧನೋರ್ವನನ್ನು ಆಸ್ಪತ್ರೆಗೆ ಕಳುಹಿಸಲು ಸ್ಥಳೀಯರು ಹರಸಾಹಸ ಪಡುತ್ತಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಕಂಡು ಬಂದಿದೆ.
ಈ ವೃದ್ಧ ಕೇರಳದಿಂದ ಬಾಗಲಕೋಟೆ ಜಿಲ್ಲೆ ಮುಧೋಳಕ್ಕೆ ಬಂದು, ನಂತರ ಅಲ್ಲಿಂದ ಗದಗ ಜಿಲ್ಲೆ ನಿಡಗುಂದಿ ಗ್ರಾಮಕ್ಕೆ ಬಂದಿದ್ದಾರೆ. ಕಳೆದ ಹತ್ತಾರು ದಿನಗಳ ಹಿಂದಷ್ಟೇ ಗ್ರಾಮದ ದೇವಸ್ಥಾನದಲ್ಲಿ ಬೀಡು ಬಿಟ್ಟಿದ್ದ ಎನ್ನಲಾಗಿದೆ. ಕಳೆದ ರಾತ್ರಿ ಜ್ವರ ಹಾಗೂ ಕೆಮ್ಮಿನಿಂದ ನರಳಾಡಿದ್ದ ವೃದ್ಧನನ್ನು ಗಮನಿಸಿದ ಸ್ಥಳಿಯರು ಕೊರೊನಾ ಶಂಕೆ ಹಿನ್ನೆಲೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲು ಮುಂದಾಗಿದ್ದಾರೆ.
ಆದ್ರೆ ಈ ವೃದ್ದ ಯಾರ ಕೈಗೂ ಸಿಗದೇ ಗ್ರಾಮದ ತುಂಬೆಲ್ಲಾ ಓಡಾಟ ನಡೆಸಿದ್ದಾರೆ. ಈ ವೇಳೆ , ನಂಗೆ ಏನು ಆಗಿಲ್ಲ ನಾನು ಯಾಕೆ ಆಸ್ಪತ್ರೆಗೆ ಹೋಗಬೇಕು? ಎಂದು ಸ್ಥಳೀಯರೊಂದಿಗೆ ವಾಗ್ವಾದ ಮಾಡಿದ್ದಾನೆ. ನಂತರ ಪೊಲೀಸರ ಸಹಾಯದಿಂದ ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.