ETV Bharat / state

ಧಾರವಾಡ ಸೋಂಕಿತ ಗದಗ ಬಸ್‌ನಲ್ಲಿ ಪ್ರಯಾಣ: ಜಿಲ್ಲೆಯಾದ್ಯಂತ ಹೈ-ಅಲರ್ಟ್!

author img

By

Published : Mar 22, 2020, 1:51 PM IST

13ರಂದು ಮುಂಜಾನೆ ಗದಗಿನಲ್ಲಿ 6 ಜನ, ಅಡವಿ ಸೋಮಾಪುರ ತಾಂಡಾದಲ್ಲಿ 11 ಜನ, ಪಾಪನಾಶಿ ತಾಂಡಾದಲ್ಲಿ 3 ಜನ ಮತ್ತು ಸಿಂಗಟರಾಯನಕೆರೆ ತಾಂಡಾದಲ್ಲಿ 7ಜನ ಇಳಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

gadaga
ಗದಗ

ಗದಗ : ಕೊರೊನಾ ಸೋಂಕಿಗೆ ಒಳಗಾಗಿದ್ದ ಧಾರವಾಡದ ವ್ಯಕ್ತಿ ಪಣಜಿಯಿಂದ ಗದಗಿಗೆ ಬರುವ ಬಸ್‌ನಲ್ಲಿ ಪ್ರಯಾಣಿಸಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ತಿಂಗಳ 13ರಂದು ಮುಂಜಾನೆ ಪಣಜಿಯಿಂದ ಗದಗಿಗೆ ಬರುವ ಬಸ್​ನಲ್ಲಿ ಸೋಂಕು ತಗುಲಿದ್ದ ವ್ಯಕ್ತಿ ಪ್ರಯಾಣಿಸಿದ್ದ. ಹೀಗಾಗಿ ಜಿಲ್ಲೆಯಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ. 12-3-2020ರ ರಾತ್ರಿ 8-45ಕ್ಕೆ ಹೊರಟ ಪಣಜಿ-ಗದಗ ಬಸ್ ಸಂಖ್ಯೆ ಕೆಎ- 26-F-962 ಈ ಬಸ್ಸಿನಲ್ಲಿ 30 ಪ್ರಯಾಣಿಕರಿದ್ದರು. ಇದರಲ್ಲಿ ಪ್ರಯಾಣಿಸಿ ಧಾರವಾಡದಲ್ಲಿ ಇಳಿದ ವ್ಯಕ್ತಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಾದ್ಯಂತ ಹೈ-ಅಲರ್ಟ್‌..

13ರಂದು ಮುಂಜಾನೆ ಗದಗಿನಲ್ಲಿ 6 ಜನ, ಅಡವಿ ಸೋಮಾಪುರ ತಾಂಡಾದಲ್ಲಿ 11 ಜನ, ಪಾಪನಾಶಿ ತಾಂಡಾದಲ್ಲಿ 3 ಜನ ಮತ್ತು ಸಿಂಗಟರಾಯನಕೆರೆ ತಾಂಡಾದಲ್ಲಿ 7ಜನ ಇಳಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಬಸ್ಸಿನ ವಾಹನ ಚಾಲಕ ಹಾಗೂ ನಿರ್ವಾಹಕ ಈಗಾಗಲೇ ಗದಗ ಜಿಮ್ಸ್​ನಲ್ಲಿ ಚಿಕಿತ್ಸೆ ಒಳಪಟ್ಟಿದ್ದಾರೆ. ಹಲವು ಪ್ರಯಾಣಿಕರ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ ಅಂದು ಪಣಜಿಯಿಂದ ಆಗಮಿಸಿದ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ತಕ್ಷಣ ಗದಗದ ಜಿಮ್ಸ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಂದು ಪರೀಕ್ಷೆಗೆ ಒಳಗಾಗಬೇಕೆಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.