ಗದಗ: ಕೊರೊನಾ ಎಫೆಕ್ಟ್ನಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಜಿಲ್ಲೆಯ ಚಮ್ಮಾರರಿಗೂ ಇದರ ಕಹಿ ಅನುಭವ ಆಗಿದೆ.
ಹೌದು, ಚಮ್ಮಾರರ ಬದುಕು ಸಹ ಅತಂತ್ರವಾಗಿದೆ. ಬೀದಿ ಪಕ್ಕದಲ್ಲಿ ಮುರುಕು ಕೊಡೆಯ ಕೆಳಗೆ ಪಾದರಕ್ಷೆ ಹೊಲೆಯುವ ಕೈಗಳಿಗೆ ಈಗ ಕೊರೊನಾ ಲಾಕ್ಡೌನ್ ಬಿಸಿ ತಟ್ಟಿದೆ. ಪರಿಣಾಮ ನೂರಾರು ಜನರ ಬದುಕು ಈಗ ಮೂರಾಬಟ್ಟೆಯಾಗಿದೆ. ಸಂತೆ, ಬಜಾರ್ಗಳಿಗೆ ಬ್ರೇಕ್ ಬಿದ್ದಿದ್ದರಿಂದ ಚಮ್ಮಾರರು ಹೊಟ್ಟೆಪಾಡಿಗೆ ಪಡಬಾರದ ಕಷ್ಟಪಡುತ್ತಿದ್ದಾರೆ.
ಇದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಮನೆ ಮನೆಗೆ ತೆರಳಿ ಚಪ್ಪಲಿ ರಿಪೇರಿ ಮಾಡಲು ಮುಂದಾಗಿದ್ದಾರೆ. ಕುರಿಗಾಹಿಗಳಿಗೆ ರೈತರಿಗೆ ಚಪ್ಪಲಿ ತಯಾರಿಸುತ್ತಿದ್ದ ಈ ಕುಟುಂಬಗಳು ಕೆಲಸವಿಲ್ಲದೆ ಬದುಕು ನಡೆಸಲು ಪರದಾಡುತ್ತಿದ್ದಾರೆ.