ETV Bharat / state

ರೈತರ ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ : ಹೆಚ್ ಕೆ ಪಾಟೀಲ್ - ಪ್ರಸ್ತುತ ದಿನಗಳಲ್ಲಿ ಅನ್ನದಾತರನ್ನು ಕಡೆಗಣಿಸಲಾಗುತ್ತಿದೆ

ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿ ವಿರುದ್ಧ ನಡೆದುಕೊಳ್ಳುತ್ತಿದೆ. ಇಂದಿನ ಹೋರಾಟಕ್ಕೆ ಕಾಂಗ್ರೆಸ್​ನ ಸಂಪೂರ್ಣ ಬೆಂಬಲವಿದೆ..

protest
ಹೆಚ್​.ಕೆ.ಪಾಟೀಲ್
author img

By

Published : Jan 26, 2021, 3:59 PM IST

ಗದಗ : 72ನೇ ಗಣರಾಜ್ಯೋತ್ಸವವನ್ನು ಗದಗ ಜಿಲ್ಲೆಯಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಗದಗನ ಕೆ ಹೆಚ್‌ ಪಾಟೀಲ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ ಅವರು ಧ್ವಜಾರೋಹಣ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಿದರು.

ಪೊಲೀಸರ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಗದಗ ಶಾಸಕ ಹೆಚ್ ಕೆ ಪಾಟೀಲ್, ಎಂಎಲ್​ಸಿ ಎಸ್ ವಿ ಸಂಕನೂರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ರೈತರ ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ : ಮಾಜಿ ಸಚಿವ ಹೆಚ್ ಕೆ ಪಾಟೀಲ್

ಈ ವೇಳೆ ಮಾತನಾಡಿದ ಶಾಸಕ ಹೆಚ್​.ಕೆ.ಪಾಟೀಲ್ ಅವರು, ಪ್ರಸ್ತುತ ದಿನಗಳಲ್ಲಿ ಅನ್ನದಾತರನ್ನು ಕಡೆಗಣಿಸಲಾಗುತ್ತಿದೆ. ರೈತರ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿ ವಿರುದ್ಧ ನಡೆದುಕೊಳ್ಳುತ್ತಿದೆ. ಇಂದಿನ ಹೋರಾಟಕ್ಕೆ ಕಾಂಗ್ರೆಸ್​ನ ಸಂಪೂರ್ಣ ಬೆಂಬಲವಿದೆ ಎಂದರು. ಹೆಚ್​ಕೆ ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್, ಕೇಂದ್ರ-ರಾಜ್ಯ ಸರ್ಕಾರ ರೈತರ ಪರವಾಗಿವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.