ETV Bharat / state

4.5 ಕೆಜಿ ನಕಲಿ ಚಿನ್ನ ಅಡವಿಟ್ಟು ಮೋಸ: ನಗರಸಭೆ ಮಾಜಿ‌ ಉಪಾಧ್ಯಕ್ಷರ ಮಗ, 18 ಮಂದಿ ವಿರುದ್ಧ ದೂರು

ಗದಗ ನಗರದ ಐಡಿಬಿಐ ಬ್ಯಾಂಕ್​ನಲ್ಲಿ ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟಗೇರಿ ನಗರಸಭೆ ಮಾಜಿ‌ ಉಪಾಧ್ಯಕ್ಷನ ಮಗ ಸೇರಿ 18 ಮಂದಿ ವಿರುದ್ಧ ದೂರು ದಾಖಲಾಗಿದೆ.

bank fraud case
ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂ ವಂಚನೆ
author img

By

Published : Nov 4, 2022, 12:46 PM IST

Updated : Nov 4, 2022, 1:00 PM IST

ಗದಗ: ನಗರದ ಐಡಿಬಿಐ ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಮಾಸ್ಟರ್ ಮೈಂಡ್ ದತ್ತಾತ್ರೇಯ ಬಾಕಳೆಯು ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಪುತ್ರನಾಗಿದ್ದು, ಇದೇ ವರ್ಷದ ಏಪ್ರಿಲ್ ತಿಂಗಳಿಂದ ಜೂನ್​ವರೆಗೆ ಸಹಚರರ ಹೆಸರಲ್ಲಿ ಬ್ಯಾಂಕ್​ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟಿದ್ದ. ಬ್ಯಾಂಕ್​ನಲ್ಲಿನ ಚಿನ್ನ ಪರಿಶೀಲಿಸುವ ಸುರೇಶ್ ರೇವಣಕರ ಎಂಬುವರ ಸಹಾಯ ಪಡೆದು ದುಷ್ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ದತ್ತಾತ್ರೇಯ ಮತ್ತು ಆತನ ತಂಡದ ಸದಸ್ಯರು ತರುತ್ತಿದ್ದ ನಕಲಿ ಚಿನ್ನಕ್ಕೆ 22 ಕ್ಯಾರೆಟ್ ಗೋಲ್ಡ್​ ಅಂತ ಸುರೇಶ್ ಸರ್ಟಿಫಿಕೇಟ್ ಕೊಡುತ್ತಿದ್ದನಂತೆ. ಪ್ರಮಾಣ ಪತ್ರ ಪಡೆದ ಎರಡು ತಿಂಗಳ ಅಂತರದಲ್ಲಿ ಬೇರೆ ಬೇರೆ ಹೆಸರಲ್ಲಿ ಒಟ್ಟು 4,871.04 ಗ್ರಾಂ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷದ 34 ಸಾವಿರ ರೂಪಾಯಿ ಸಾಲದ ರೂಪದಲ್ಲಿ ಪಡೆದಿದ್ದಾರೆ.

ಇದನ್ನೂ ಓದಿ: ಫೈನಾನ್ಸ್​​ ಕಂಪನಿ ವಿರುದ್ಧ ವಂಚನೆ ಆರೋಪ: ಸದಸ್ಯರ ಮನೆಗಳ ಮುಂದೆ ಜನರ ಪ್ರತಿಭಟನೆ

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್​ನಲ್ಲಿ ಇರಿಸಲಾಗಿದ್ದ ಚಿನ್ನವನ್ನ ಪರಿಶೀಲನೆ ಮಾಡಲಾಗಿತ್ತು‌. ಈ ವೇಳೆ ಕೆಲವು ಚಿನ್ನಾಭರಣ ನಕಲಿ‌ ಅನ್ನೋದು ಪತ್ತೆಯಾಗಿದೆ. ವಂಚನೆಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದ ಬ್ಯಾಂಕ್ ಮ್ಯಾನೇಜರ್ ಪರಶುರಾಮ ರೊಟ್ಟಿಗವಾಡ ಅವರು ಮುಖ್ಯ ಕಚೇರಿಗೆ ಮಾಹಿತಿ ನೀಡಿದ್ರು. ಮೇಲಾಧಿಕಾರಿಗಳ ಅನುಮತಿ ಪಡೆದ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯ ಆರೋಪಿ ಬೆಂಗಳೂರಲ್ಲಿ ಬಂಧನ: ದತ್ತಾತ್ರೇಯ ಕಳೆದ ಕೆಲ ವರ್ಷಗಳಿಂದ ವಿವಿಧ ವಂಚನೆ ಕೇಸ್​ಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರಿನಲ್ಲಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಮಾಹಿತಿ ಸಿಕ್ಕಿದ್ದು, ಉಳಿದ 17 ಜನರಿಗಾಗಿ ಹುಡಕಾಟ ನಡೆಯುತ್ತಿದೆ.

ಇದನ್ನೂ ಓದಿ: ಶುಶೃತಿ ಬ್ಯಾಂಕ್ ವಂಚನೆ​ ಪ್ರಕರಣ: 14 ಕಡೆ ಏಕಕಾಲಕ್ಕೆ ಸಿಸಿಬಿ ದಾಳಿ, ನಗದು ಪತ್ತೆ

ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದೆ. ವಂಚನೆಗೆ ಸಹಕಾರ ನೀಡಿದ್ದ ಬ್ಯಾಂಕ್​ನಲ್ಲಿ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಬಾಕಳೆ, ಅರಣ್ ಕುಮಾರ್, ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಮಾಣಿಕ್ ಲಕ್ಕುಂಡಿ, ದಾನೇಶ್ ಉಮಾದಿ, ರಾಕೇಶ್ ನವಲಗುಂದ, ಮಂಜುನಾಥ ಹೊಸದು, ಸುಚೀತ ಕುಮಾರ ಹರಿವಾನ, ದುಂಡಪ್ಪ ಕೊಟ್ಟೂರು ಶೆಟ್ಟರ್, ಸಿದ್ಧಾರ್ಥ್ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ್ ಹರಿವಾಣ, ಸಂತೋಷ ವೀರಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ. ನಕಲಿ ಚಿನ್ನಾಭರಣ ಎಲ್ಲಿಂದ ಖರೀದಿ ಮಾಡಿದ್ರು. ಆರೋಪಿಗಳಿಂದ ಎಷ್ಟು ಹಣ ಸೀಜ್ ಮಾಡಲಾಗಿದೆ ಅನ್ನೋ ಮಾಹಿತಿ ಮುಂದಿನ ತನಿಖೆಯ ಬಳಿಕ ತಿಳಿದು ಬರಲಿದೆ.

Last Updated : Nov 4, 2022, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.