ಗದಗ: ಕಳೆದೊಂದು ವಾರದಿಂದ ಬಾವಿಯಲ್ಲಿ ಬಿದ್ದು ಪರಿತಪಿಸುತ್ತಿದ್ದ ನಾಗರಹಾವನ್ನು ಉರಗ ತಜ್ಞರೊಬ್ಬರು ಸ್ಥಳೀಯರ ನೆರವಿನಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಈ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹನುಮಂತಗೌಡರ ತೋಟದ ಬಾವಿಯಲ್ಲಿ ಈ ನಾಗರಹಾವು ಆರೇಳು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿತ್ತು. ಈ ಹಾವನ್ನು ಬಾವಿಯಿಂದ ತೆಗೆದು ರಕ್ಷಿಸುವಂತೆ ಹನುಮಂತ ಗೌಡ ಅರಣ್ಯ ಇಲಾಖೆಗೆ ತಿಳಿಸಿದ್ದರು. ಆದರೆ ಇಲಾಖೆ ಮಾತ್ರ ಮುತುವರ್ಜಿ ವಹಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಬಳಿಕ ಉರಗ ತಜ್ಞ ಮಂಜುನಾಥ ನಾಯಕ ಅವರನ್ನು ಕರೆಸಿಕೊಳ್ಳಲಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ನೀರು ತುಂಬಿದ ಬಾವಿಯಲ್ಲಿ ತೊಟ್ಟಿಲು ಬಿಡುವ ಮೂಲಕ ಹಾವನ್ನು ಮೇಲೆತ್ತಲಾಗಿದ್ದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.