ಗದಗ : ಮನೆಗಳನ್ನು ಉಚಿತವಾಗಿ ನೀಡುವ ಹೇಳಿಕೆಯನ್ನು ಯಾರೇ ನೀಡಿದರೂ ಸಹ ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಪರೋಕ್ಷವಾಗಿ ಶಾಸಕ ಎಚ್.ಕೆ ಪಾಟೀಲ್ ಅವರಿಗೆ ಸಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಸಿ ಪಾಟೀಲ್, ಗಂಗಿಮಡಿಯಲ್ಲಿ ನಿರ್ಮಾಣವಾಗ್ತಿರೋ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಉಚಿತವಾಗಿ ಮನೆ ನೀಡುವ ಶಾಸಕ ಎಚ್.ಕೆ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಉಚಿತ ಮನೆ ನಿಡುವ ಹೇಳಿಕೆಗಳು ನನ್ನ ಗಮನಕ್ಕೆ ಬಂದಿಲ್ಲ. ಆದ್ರೆ ಆ ಯೋಜನೆಯ ಮಾನದಂಡವನ್ನು ನಾವೆಲ್ಲರೂ ಅನುಸರಿಸಬೇಕಾಗುತ್ತದೆ. ಕಾನೂನನ್ನು ಮೀರಿ ಯಾರಾದರೂ ಬಡವರಿಂದ ಹಣ ವಸೂಲಿ ಮಾಡ್ತಿದ್ರೆ ಅದನ್ನು ತಡೆಯುತ್ತೇನೆ ಎಂದೂ ಹೇಳಿದರು.
ಇನ್ನು ಕಪ್ಪತಗುಡ್ಡದ ವಿಚಾರವಾಗಿ ಮಾತನಾಡಿದ ಅವರು, ಕಪ್ಪತಗುಡ್ಡದ ಯಾವುದೇ ಬಗೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗದು. ನಮ್ಮ ನಿರ್ಧಾರವನ್ನು ಕೇಂದ್ರಕ್ಕೆ ಕಳಿಸುತ್ತೇವೆ. ಅವರು ಮುಂದೇನು ಮಾಡಬೇಕು ಎಂದು ನಿರ್ಣಯ ಕೈಗೊಳ್ಳುತ್ತಾರೆ ಎಂದರು. ಡಿಸಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಕಪ್ಪತಗುಡ್ಡದ ಕುರಿತು ಚರ್ಚೆ ನಡೆಸುತ್ತೇನೆಂದು ಭರವಸೆ ನೀಡಿದರು.
ಕಪ್ಪತಗುಡ್ಡ ಪ್ರದೇಶದಲ್ಲಿ ನಡೆಯುತ್ತಿರೋ ಕ್ರಷರ್ಗಳ ಕಾರ್ಯದ ಕುರಿತು ಉತ್ತರಿಸಿದ ಸಿ.ಸಿ ಪಾಟೀಲ್, ವನ್ಯಜೀವಿಧಾಮ ಎಂದು ಘೋಷಣೆಯಾಗುವುದಕ್ಕೂ ಮೊದಲೇ ಅಲ್ಲಿ ಕ್ರಷರ್ಗಳು ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ಕ್ರಷರ್ಗಳಿಗೂ ಪರವಾನಗಿ ನೀಡಿಲ್ಲ ಎಂದರು.