ETV Bharat / state

500 ವರ್ಷಗಳಲ್ಲಿ ಮೊದಲ ಬಾರಿಗೆ ಐತಿಹಾಸಿಕ ಗದಗನ ತೋಂಟದಾರ್ಯ ಮಠದ ಜಾತ್ರೆ ರದ್ದು..

ಏಪ್ರಿಲ್ 7 ರಿಂದ 10ರವರೆಗೆ ಗದಗನ ತೋಂಟದಾರ್ಯ ಮಠದಲ್ಲಿ ನಡೆಯಬೇಕಿದ್ದ ಜಾತ್ರೆಯನ್ನು ಕೊರೊನಾ ಭೀತಿಯಿಂದಾಗಿ ರದ್ದು ಮಾಡಲಾಗಿದೆ.

Gadag Tondadarya fair
ತೋಂಟದಾರ್ಯ ಮಠ
author img

By

Published : Mar 25, 2020, 11:17 AM IST

ಗದಗ : ಕೊರೊನಾ ಭೀತಿ ಹಿನ್ನೆಲೆ ಗದಗನ ಐತಿಹಾಸಿಕ ತೋಂಟದಾರ್ಯ ಮಠದ ಜಾತ್ರೆ ರದ್ದಾಗಿದೆ. ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತೋಂಟದಾರ್ಯ ಮಠದ ಜಗದ್ಗುರು ಶ್ರೀ ಡಾ. ತೋಂಟದ ಸಿದ್ಧರಾಮ ಶ್ರೀಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Press release
ಪತ್ರಿಕಾ ಪ್ರಕಟಣೆ

ಏಪ್ರಿಲ್ 7 ರಿಂದ 10ರವರೆಗೆ ನಡೆಯಬೇಕಿದ್ದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಸೇರಲಿದ್ದರು. ಆದರೆ, ನಾಡಿನಾದ್ಯಂತ ಲಾಕ್‌ಡೌನ್ ಮಾಡಿರೋ ಹೊತ್ತಿನಲ್ಲಿ ಶ್ರೀಗಳ ನಿರ್ಧಾರ ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ. ಈ ಮೂಲಕ ಸುಮಾರು 500 ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದ ಜಾತ್ರೆ ಮೊದಲ ಬಾರಿಗೆ ರದ್ದಾಗಿದೆ.

ಗದಗನ ಶ್ರೀತೋಂಟದಾರ್ಯ ಮಠ..

ಇಂದು ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಾತ್ರಾ ಸಮಿತಿ ಸದಸ್ಯರು, ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು, ಮಠದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.