ETV Bharat / state

ಮದುವೆಯಲ್ಲಿ ಊಟದ ಬದಲು ಬಡವರಿಗೆ ದಿನಸಿ ಕಿಟ್ ಹಂಚಿದ ವಧು-ವರರು

author img

By

Published : Jun 14, 2021, 2:27 PM IST

ತಮ್ಮ ವಿವಾಹದಲ್ಲಿ ವಧು-ವರರು ಬಂಧುಗಳಿಗೆ ಊಟ ಹಾಕುವ ಬದಲು ಬಡ ಜನರಿಗೆ ದಿನಸಿ ಕಿಟ್, ಔಷಧಿ, ಮಾಸ್ಕ್ ಹಂಚಿದ್ದಾರೆ. ಆ ಮೂಲಕ ತಮ್ಮ ಬಾಳ ಹೊಸ ಪಯಣವನ್ನ ಅರ್ಥಪೂರ್ಣಗೊಳಿಸಿಕೊಂಡಿದ್ದಾರೆ..

Gadag
ಬಡವರಿಗೆ ದಿನಸಿ ಕಿಟ್ ಹಂಚಿದ ವಧು-ವರರು

ಗದಗ : ಜಿಲ್ಲೆಯ ಕಳಸಾಪುರದಲ್ಲಿ ನಡೆದ ವಿವಾಹವೊಂದರಲ್ಲಿ ವಧು-ವರರು ಬಂಧುಗಳಿಗೆ ಊಟ ಹಾಕುವ ಬದಲು ಬಡ ಜನರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿತಾ ಪೂಣಚ್ಚ ರಾಜ್ಯಾದ್ಯಂತ ಕೊರೊನಾ ಜಾಗೃತಿ ಮೂಡಿಸುವ ಜೊತೆಗೆ ಬಡ ಜನರಿಗೆ ದಿನಸಿ ಕಿಟ್ ಹಂಚುತ್ತಿದ್ದಾರೆ.

ಬಡವರಿಗೆ ದಿನಸಿ ಕಿಟ್ ಹಂಚಿದ ವಧು-ವರರು..

ಭುವನ್ ಅಭಿಮಾನಿಯಾದ ವರ ಕೃಷ್ಣ, ತಮ್ಮ ನೆಚ್ಚಿನ ನಟನ ಸಾಮಾಜಿಕ ಕಾರ್ಯಗಳಿಂದ ಪ್ರೇರೇಪಣೆಗೊಂಡು ತಮ್ಮ ಮದುವೆಯಲ್ಲಿ ಬಂಧುಗಳಿಗೆ ಊಟ ಹಾಕುವ ಬದಲು, ಬಡ ಜನರಿಗೆ ದಿನಸಿ ಕಿಟ್, ಔಷಧಿ, ಮಾಸ್ಕ್ ಹಂಚಿದ್ದಾರೆ.

ಈ ಮದುವೆ ಕಾರ್ಯಕ್ರಮದಲ್ಲಿ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಭಾಗಿಯಾಗಿ ಕೊರೊನಾ ಜಾಗೃತಿ ಮೂಡಿಸಿದರು.

ಇದನ್ನೂ ಓದಿ: ಇಹಲೋಕದ 'ಸಂಚಾರ' ನಿಲ್ಲಿಸಿದ ವಿಜಯ್: ಸಿಎಂ, ಕಿಚ್ಚ ಸುದೀಪ್‌ ಕಂಬನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.