ETV Bharat / state

ಇವರು ನನ್ನ ಕ್ಷೇತ್ರದ ಕಾರ್ಯಕರ್ತ, ವಾಹನ ಹಿಡಿಯಬೇಡಿ: ಶಾಸಕರಿಂದ ಶಿಫಾರಸು?

author img

By

Published : Jul 12, 2022, 9:48 PM IST

ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರು ತಮ್ಮ ಪಕ್ಷದ ಚಿರಪರಿಚಿತ ಕಾರ್ಯಕರ್ತರಿಗೆ ಶಿಫಾರಸು ಮಾಡಿ ನೀಡಿರುವ ಪತ್ರವೊಂದು ಚರ್ಚೆಗೆ ಗ್ರಾಸವಾಗಿದೆ.

bjp-mla-ramanna-lamanis-recommendation-letter-to-his-party-supporter
ಇವನು ನನ್ನ ಕ್ಷೇತ್ರದ ಕಾರ್ಯಕರ್ತ. ಇವನ ಜೀಪ್ ಹಿಡಿಯಬೇಡಿ... ಬಿಜೆಪಿ ಶಾಸಕನ ಶಿಫಾರಸ್ಸು...!?

ಗದಗ: ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ಹೆಸರಲ್ಲಿರುವ ಶಿಫಾರಸು ಪತ್ರವೊಂದು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ‌. ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರು ಕಾರ್ಯಕರ್ತನೊಬ್ಬನಿಗೆ ನೀಡಿದ್ದಾರೆ ಎನ್ನಲಾದ ಶಿಫಾರಸು ಪತ್ರದಲ್ಲಿ ಆತನ ವಾಹನವನ್ನು ಹಿಡಿಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಜಿ ಬಸವರಾಜ್ ಅವರು ನನ್ನ ಮತಕ್ಷೇತ್ರ ಶಿರಹಟ್ಟಿ ವಿಧಾನಸಭಾ ವ್ತಾಪ್ತಿಗೆ ಒಳಪಟ್ಟಿರುತ್ತಾರೆ. ಸದರಿಯವರು ನಮ್ಮ ಪಕ್ಷದ ಕಾರ್ಯಕರ್ತರಾಗಿರುತ್ತಾರೆ ಮತ್ತು ನಮಗೆ ಚಿರಪರಿಚಿತರು. ಇವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು, ವಾಹನ ಸಂಖ್ಯೆ AP 39 V 3517 ಇದ್ದು, ಈ ವಾಹನವನ್ನು ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದಿದ್ದಾರೆ.

bjp-mla-ramanna-lamanis-recommendation-letter-to-his-party-supporter
ಬಿಜೆಪಿ ಶಾಸಕನ ಶಿಫಾರಸ್ಸು

ಸದ್ಯ ಈ ಪತ್ರ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ತಾವೇ ಖುದ್ದು ನೀಡಿರುವುದಾ ಅಥವಾ ತಮ್ಮ ಹೆಸರಲ್ಲಿರುವ ನಕಲಿ ಪತ್ರವೇ ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕಿದೆ.

ಓದಿ : ಕಬಿನಿಯಿಂದ ಹೊರ ಹರಿವು ಹೆಚ್ಚಳ: ಮೊದಲ ಬಾರಿಗೆ ನಂಜನಗೂಡಿನ ಪರಶುರಾಮ ದೇವಾಲಯ ಮುಳುಗಡೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.