ETV Bharat / state

ಲಾಕ್​ಡೌನ್: ಸಂಕಷ್ಟದ ಜನತೆಗೆ ನೆರವಾಗಲು ಭಿಕ್ಷಾಟನೆಗೆ ಇಳಿದ ಗದಗ ಬಿಜೆಪಿ ಮುಖಂಡ - ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ

ಹಳ್ಳಿಗಳಲ್ಲಿ ಓಡಾಡಿ ಅಲ್ಲಿನ ರೈತರ ಬಳಿ ಹೋಗಿ ಧವಸ ಧಾನ್ಯ, ರೊಟ್ಟಿ ಹೀಗೆ ತಮಗೆ ಏನು ಸಾಧ್ಯತೆ ಇದೆಯೋ ಅದನ್ನು ಭಿಕ್ಷೆಯಾಗಿ‌ ಪಡೆದು, ಅದನ್ನ ಊಟಕ್ಕೆ, ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದ ಜನರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ಮುಖಂಡ ಅನಿಲ್​​ ಮೆಣಸಿನಕಾಯಿ ಮಾಡಿದ್ದಾರೆ.

BJP leader who has begged for help the peolple at Gadag
ಕೊರೊನಾ ಎಫೆಕ್ಟ್, ಜನರಿಗೆ ಸಹಾಯ ಮಾಡಲು ಭಿಕ್ಷಾಟನೆಗೆ ಇಳಿದ ಗದಗ ಬಿಜೆಪಿ ಮುಖಂಡ...
author img

By

Published : Apr 27, 2020, 7:41 PM IST

ಗದಗ: ಕೊರೊನಾ ಎಫೆಕ್ಟ್ ಹಿನ್ನೆಲೆ ಜಿಲ್ಲೆಯಲ್ಲಿ ತತ್ತರಿಸಿದ ಜನರಿಗೆ ನೆರವಾಗಲು ಬಿಜೆಪಿಯ ಮುಖಂಡ ಅನಿಲ್​ ಮೆಣಸಿನಕಾಯಿ ಅವರು ಭಿಕ್ಷಾಟನೆಗೆ ಇಳಿದಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಬಿಕ್ಷಾಟನೆ ನಡೆಸಿದ ಮೆಣಸಿನಕಾಯಿ ಅವರು ರೈತರಿಂದ ದವಸ- ಧಾನ್ಯಗಳು, ರೊಟ್ಟಿ ಸೇರಿದಂತೆ ಇತರೆ ವಸ್ತುಗಳನ್ನು ಸ್ವೀಕರಿಸಿದ್ದಾರೆ.

ಗದಗನಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲು ಭಿಕ್ಷಾಟನೆಗೆ ಇಳಿದ ಬಿಜೆಪಿ ಮುಖಂಡ

ಕ್ಷೇತ್ರದ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಓಡಾಡಿ ಅಲ್ಲಿನ ರೈತರಿಂದ ದವಸ- ಧಾನ್ಯ, ರೊಟ್ಟಿಯನ್ನು ಭಿಕ್ಷೆಯಾಗಿ‌ ಪಡೆದು, ಅದನ್ನು ಊಟಕ್ಕೂ ಪರದಾಡುತ್ತಿರುವ ಕುಟುಂಬಗಳಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ.

ಭಿಕ್ಷಾಟನೆ ಕಾರ್ಯಕ್ರಮಕ್ಕೆ‌ ಸಚಿವ ಸಿಸಿ ಪಾಟೀಲ್ ಅವರು ಚಾಲನೆ ನೀಡಿ, ಬೆಂಬಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.