ETV Bharat / state

ಬೇವಿನ ಬೀಜದಿಂದ ಬಯೋಡೀಸೆಲ್: ಗ್ರಾಮೀಣಾಭಿವೃದ್ಧಿ ಪಂಚಾಯತ್​ರಾಜ್​ ವಿವಿಯಿಂದ ಪ್ರಯತ್ನ - ಬೇವಿನ ಬೀಜ

ಬೇವಿನ ಬೀಜದಿಂದ ಡೀಸೆಲ್ ತಯಾರಿಕೆ ಆರಂಭಿಕ ಹಂತದಲ್ಲಿದ್ದು ಪ್ರಾಯೋಗಿಕವಾಗಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಒಂದು ಲೀಟರ್​ ಡೀಸೆಲ್ ಉತ್ಪಾದಿಸಲು ಅಂದಾಜು 120 ರೂ. ಖರ್ಚಾಗುತ್ತದೆ. ಆದರೆ ಈ ಡೀಸೆಲ್ ಉತ್ಪಾದನೆಯ ವೇಳೆ ವೇಸ್ಟೇಜ್ ಇಲ್ಲದ ಕಾರಣ ಲಾಭಾಂಶ ಹೆಚ್ಚಾಗಿರಲಿದೆ.

bio-diesel-Production-by-panchayat-vv-from-neem-seeds
ಬೇವಿನ ಬೀಜದಿಂದ ಬಯೋಡೀಸೆಲ್ ಉತ್ಪಾದನೆ
author img

By

Published : Aug 18, 2021, 12:54 PM IST

ಗದಗ​: ಇಂಧನ ಬೆಲೆ ಗಗನಕ್ಕೇರುತ್ತಿರುವ ನಡುವೆ ವಾಹನ ಸವಾರರ ಪಾಡು ಹೇಳತಿರದ್ದಾಗಿದೆ. ಆದರೆ ಈ ಇಂಧನ ಬೆಲೆ ಏರಿಕೆಗೆ ಕಡಿವಾಣಕ್ಕೆ ಗದಗದಲ್ಲಿ ಬೇವಿನ ಬೀಜದಿಂದ ಡೀಸೆಲ್​​ ತಯಾರಿಸಿ ಯಶಸ್ವಿಯಾಗಿದ್ದಾರೆ.

ಗದಗ ನಗರದ ನಾಗಾವಿ ಗುಡ್ಡದಲ್ಲಿರೋ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​​​ರಾಜ್​ ವಿವಿಯಿಂದ ಹೊಸ ಪ್ರಯತ್ನವೊಂದು ಆರಂಭವಾಗಿದೆ. ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ವಿವಿಯಲ್ಲಿ ಈ ಘಟಕ ಆರಂಭಿಸಲಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿಯ ಸಹಯೋಗದಲ್ಲಿ ಆರಂಭವಾದ ಈ ಘಟಕ ಮುಂದಿನ ದಿನಗಳಲ್ಲಿ ಆಮದು ಮೇಲಿನ ಒತ್ತಡ ಕಡಿಮೆ ಮಾಡಿ ಸ್ವಾವಲಂಬಿಯಾಗಿ ಇಂಧನ ಕೊರತೆ ನೀಗಿಸುವ ಪ್ರಯತ್ನ ಮಾಡಲಾಗ್ತಿದೆ.

ಬೇವಿನ ಬೀಜದಿಂದ ಬಯೋಡೀಸೆಲ್ ಉತ್ಪಾದನೆ

1 ಲೀಟರ್ ಡೀಸೆಲ್​ ತಯಾರಿಕೆಗೆ 4 ಕೆ.ಜಿ ಬೇವಿನ ಬೀಜ ಬಳಕೆ

ಮುಖ್ಯವಾಗಿ ನೈಸರ್ಗಿಕವಾಗಿ ಸಿಗುವ ಬೇವಿನ ಬೀಜದ ಜೊತೆ ಹೊಂಗೆ ಬೀಜ, ಹಿಪ್ಪೆ, ಸೀಮರೂಬ ಮತ್ತು ಜಟ್ರೋಪ (ಕಳ್ಳಿ) ಬೀಜಗಳಿಂದ ಬಯೋ ಡೀಸೆಲ್​​​​​ ತಯಾರಿಸಲಾಗ್ತಿದೆ. ಒಂದು ಲೀಟರ್​ ಡೀಸೆಲ್​​​ ಉತ್ಪಾದನೆಗೆ 4 ಕೆ.ಜಿ ಬೀಜ ಬೇಕಾಗುತ್ತದೆ. ಈ ಬೀಜಗಳನ್ನು ಮಷಿನ್​ಗಳಲ್ಲಿ ರುಬ್ಬಿ ಅದರಿಂದ ಬರುವ ರಸವನ್ನು ಸಂಸ್ಕರಣೆ ಮಾಡಿ ಇಂಧನವಾಗಿ ಪರಿವರ್ತನೆ ಮಾಡಲಾಗ್ತಿದೆ. ಇಲ್ಲಿ ಡೀಸೆಲ್​ ಜೊತೆಗೆ ಉಳಿದ ವೇಸ್ಟೇಜ್​ ಅನ್ನು ಜೈವಿಕ ಗೊಬ್ಬರವಾಗಿ, ವೇಸ್ಟೇಜ್​​ ನೀರನ್ನು ಪಿನಾಯಿಲ್ ಆಗಿ ಮತ್ತು ಸಾಬೂನು ತಯಾರಿಕೆಯಲ್ಲಿ ಬಳಕೆ ಮಾಡಲಾಗ್ತಿದೆ.

1 ಲೀಟರ್ ಡೀಸೆಲ್‌​​ ಉತ್ಪಾದನೆಗೆ 120 ರೂ. ಖರ್ಚು

ಬೀಜ ಸಂಸ್ಕರಿಸಿ ಅಗತ್ಯಕ್ಕೆ ತಕ್ಕಂತೆ ಕೆಲ ಮಿಥೆನಾಲ್ ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡುತ್ತಾರೆ. ಈ ವೇಳೆ ಬಯೋ ಡೀಸೆಲ್​​ ಮತ್ತು ಗ್ಲಿಸರಿನ್ ದ್ರಾವಣ ಬೇರ್ಪಡಿಸುತ್ತಾರೆ. ಇದರಿಂದ ಬೇರ್ಪಡಿಸಿದ ಡೀಸೆಲ್ ಅನ್ನು ವಾಟರ್​ ವಾಶ್​ ಮಾಡಲಾಗುತ್ತದೆ. ಕೊನೆಯದಾಗಿ ಶುದ್ಧ ಜೈವಿಕ ಇಂಧನ ಲಭಿಸುತ್ತದೆ.

ಒಂದು ಲೀಟರ್​ ಡೀಸೆಲ್ ಉತ್ಪಾದಿಸಲು ಅಂದಾಜು 120 ರೂ. ಖರ್ಚಾಗುತ್ತದೆ. ಆದರೆ ಈ ಖರ್ಚು ಉತ್ಪಾದನೆಯಲ್ಲಿ ಬಂದ ವೇಸ್ಟೇಜ್​ಗಳಿಂದಲೇ ಲಾಭ ಪಡೆಯಬಹುದು. ಹಿಂಡಿ ಗೊಬ್ಬರ, ಪಿನಾಯಿಲ್​, ಸಾಬೂನುಗಳಿಗೆ ಉಪಯೋಗಿಸಲಾಗುತ್ತದೆ. ಕೊನೆಯದಾಗಿ ಶೂನ್ಯ ಬೆಲೆಯಲ್ಲಿ ಡೀಸೆಲ್ ಉತ್ಪಾದನೆ ಮಾಡಿದಂತಾಗುತ್ತದೆ.

ಈ ಡೀಸೆಲ್ ತಯಾರಿಕೆ ಇನ್ನೂ ಆರಂಭಿಕ ಹಂತದಲ್ಲಿದ್ದು ಪ್ರಾಯೋಗಿಕವಾಗಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಜೊತೆಗೆ ಇದರ ಮೂಲ ಉದ್ದೇಶ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ರೈತರಿಗೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಸದ್ಯ ಇದು 50 ಲೀಟರ್​​​ನಷ್ಟು ಉತ್ಪಾದನಾ ಸಾಮರ್ಥ್ಯದ ಘಟಕವಾಗಿದ್ದು, ಮುಂದಿನ ದಿನದಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಉತ್ಪಾದನೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.