ಗದಗ : ತಂದೆಯ ಹುಟ್ಟುಹಬ್ಬಕ್ಕೆ ಕೇಕ್ ತರುವುದಕ್ಕಾಗಿ ರಸ್ತೆಗಿಳಿದಿದ್ದ ಇಬ್ಬರು ಯುವಕರ ಬೈಕ್ನ ಪೊಲೀಸರು ಸೀಜ್ ಮಾಡಿದ್ದಾರೆ.
ಸದ್ಯ ರಾಜ್ಯದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದೆ. ಈ ನಡುವೆ ಜನರು ಹೊರಗಡೆ ಬರುವುದಕ್ಕೆ ಇನ್ನಿಲ್ಲದ ಕಾರಣ ಹೇಳ್ತಾರೆ. ಮೊನ್ನೆ ಓರ್ವ ವ್ಯಕ್ತಿ ಕೋಳಿಗೆ ಅತಿಯಾದ ಬೇಧಿ ಆಗ್ತಿದ್ದು, ಅದನ್ನು ಆಸ್ಪತ್ರೆಗೆ ತೋರಿಸೋಕೆ ಬಂದಿದ್ದೀನಿ ಅಂತ ಉತ್ತರಿಸಿದ್ದ. ಇದನ್ನು ಕೇಳಿದ ಪೊಲೀಸರು ಕಕ್ಕಾಬಿಕ್ಕಿ ಆಗಿದ್ದರು.
ಇಂದು ನಗರದ ಹಳೇ ಡಿಸಿ ಕಚೇರಿ ಸರ್ಕಲ್ ಬಳಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಂದೆಯ ಹುಟ್ಟುಹಬ್ಬಕ್ಕೆ ಕೇಕ್ ತರುವುದಕ್ಕಾಗಿ ತೆರಳಿದ್ದ ಯುವಕರ ಬೈಕ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಕ್ ನಿಮಗೆ ಯಾರು ಕೊಟ್ಟರು ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಯುವಕರು, ಇಲ್ಲ ಸರ್ ಇದನ್ನ ಮನೆಯಲ್ಲಿಯೇ ತಯಾರಿಸಿದ್ದೇವೆ.
ಬೈಕ್ ಕೊಡಿ, ಇನ್ನೊಮ್ಮೆ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಗೋಳಾಡಿದರು. ಆದರೂ ಸಹ ಪೊಲೀಸರು ಬೈಕ್ ಕೊಡಲಿಲ್ಲ.
ಇದನ್ನೂ ಓದಿ: ಇನ್ನೂ 14 ದಿನ ಲಾಕ್‌ಡೌನ್ ವಿಸ್ತರಣೆ?: ಬಿಎಸ್‌ವೈ ಕೈಸೇರಿದ ಕೋವಿಡ್ ತಾಂತ್ರಿಕ ಸಮಿತಿ ವರದಿ