ಗದಗ: ಪ್ರವಾಹ ಸಂತ್ರಸ್ತರಿಗೆ ನವಗ್ರಾಮದ ಮನೆಗಳ ಹಕ್ಕುಪತ್ರ ವಿತರಣೆ ಮಾಡದ ಹಿನ್ನೆಲೆ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ಕಾರನ್ನು ಗ್ರಾಮಸ್ಥರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿರುವ ಘಟನೆ ರೋಣ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಈಗಾಗಲೇ ಮೂರು ಬಾರಿ ಪ್ರವಾಹ ಬಂದು ಸಂತ್ರಸ್ತರ ಬದುಕು ಬೀದಿ ಪಾಲಾಗಿದೆ. ಹೀಗಿದ್ದು ನವಗ್ರಾಮದ ಮನೆಗಳ ಹಕ್ಕು ಪತ್ರ ವಿತರಣೆಯಾಗಿಲ್ಲ. ಇದ್ರಿಂದ ಗ್ರಾಮಸ್ಥರು ಆಕ್ರೋಶಗೊಂಡು ರೋಣ ತಹಶೀಲ್ದಾರ್ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ರು.
2007 ಹಾಗೂ 2009ರ ಪ್ರವಾಹದ ನಂತರ ಬಿಎಸ್ ಬೇಲೇರಿ ಗ್ರಾಮದ ಜನರಿಗೆ ಸರಕಾರ ನವಗ್ರಾಮ ನಿರ್ಮಿಸಿತ್ತು. ಆದರೆ, ಇಂದಿಗೂ ಸಹ ಹಕ್ಕುಪತ್ರ ನೀಡದ ಹಿನ್ನೆಲೆ ಗೊಂದಲ ಉಂಟಾಗಿದೆ. ಇನ್ನು ಗ್ರಾಮಸ್ಥರು ಅಧಿಕಾರಿಗಳ ಕಾರನ್ನು ಅಡ್ಡಗಟ್ಟಿದ್ರೂ ಸಹ ಎಸಿ ರಾಯಪ್ಪ ಹುಣಸಗಿ ಮಾತ್ರ ಸಂತ್ರಸ್ತರ ಸಮಸ್ಯೆ ಕೇಳಲಿಲ್ಲ. ಕಾರ್ ಅಡ್ಡಗಟ್ಟಿದ್ರು ಅಂತ ಸಿಟ್ಟಾದ ಅವರು, ಸೀದಾ ತಹಶೀಲ್ದಾರ್ ಕೊಠಡಿಗೆ ತೆರಳಿದರು. ಇದು ಸಂತ್ರಸ್ತರ ಆಕ್ರೋಶವನ್ನ ಮತ್ತಷ್ಟು ಹೆಚ್ಚಿಸಿತು.