ಗದಗ: ಮನುಕುಲಕ್ಕಾಗಿ ಭಿಕ್ಷೆ ಕಾರ್ಯಕ್ರಮದಲ್ಲಿ ನಾವು ಅಂದುಕೊಂಡಂತೆ ಗದಗ ಬೆಟಗೇರಿ ಅವಳಿ ನಗರದ 15 ಸಾವಿರ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ತಲುಪಿಸಿದ್ದೇವೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದ್ದಾರೆ.
ಗದಗ ನಗರದ ಖಾಸಗಿ ಗೋಡೌನ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಧಾನ್ಯಗಳನ್ನು ಗ್ರಾಮಗಳಲ್ಲಿ ಹೋಗಿ ಭಿಕ್ಷೆಯ ರೂಪದಲ್ಲಿ ಕೇಳಿದಾಗ ಮನಪೂರ್ವಕವಾಗಿ ನೀಡಿದ ರೈತರಿಗೆ, ಅಗತ್ಯ ವಸ್ತುಗಳನ್ನು ನೀಡಿದ ಉದ್ಯಮಿಗಳು, ವ್ಯಾಪಾಸ್ಥರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಇನ್ನು ಇದೇ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಎಷ್ಟೇ ಕಷ್ಟವಾದ್ರೂ ನಿರ್ವಹಿಸಿದ್ದಾರೆ. ತಲುಪಿಸಬೇಕಾದ ಕಿಟ್ಗಳನ್ನು ಸಮಯಕ್ಕೆ ಸರಿಯಾಗಿ ಬಡವರಿಗೆ ತಲುಪಿಸುವ ಮೂಲಕ ಜವಾಬ್ದಾರಿಯುತ ಕೆಲಸ ಮಾಡಿದ್ದು, ಅವರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಇನ್ನು ಇದೇ ವೇಳೆ ಕಿಟ್ ತಯಾರಿ ಮಾಡುವಾಗ ದವಸ ಧಾನ್ಯಗಳನ್ನು ಸ್ವಚ್ಛಗೊಳಿಸುವುದಲ್ಲದೆ, ಅವುಗಳ ಪ್ಯಾಕಿಂಗ್ನಲ್ಲಿ ಸಹಕರಿಸಿದ ಎಲ್ಲಾ ಮಹಿಳೆಯರಿಗೂ ಸೀರೆ ನೀಡಿ ಅಭಿನಂದಿಸಲಾಯಿತು.