ETV Bharat / state

ಜೂಜು ಅಡ್ಡೆ ಮೇಲೆ ದಾಳಿ‌ ನಡೆಸಿ ಹಣ ವಸೂಲಿ ಆರೋಪ: ಇಬ್ಬರು ಪೊಲೀಸ್​​​ ಪೇದೆ ಅಮಾನತು

ಗದಗದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಹಣ ವಸೂಲಿ ಮಾಡಿ, ವಿಷಯ ಮುಚ್ಚಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಗದಗ ಎಸ್ಪಿ ಶ್ರೀನಾಥ್ ಜೋಶಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇಬ್ಬರು ಪೊಲೀಸ್ ಪೇದೆಗಳ ಅಮಾನತು
author img

By

Published : Sep 1, 2019, 11:39 AM IST

ಗದಗ: ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಹಣ ವಸೂಲಿ ಮಾಡಿ, ಈ ವಿಷಯ ಮುಚ್ಚಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಗದಗ ನಗರ ಠಾಣೆಯ ಹನುಮಂತ ಯಡಿಯಾಪುರ್ ಹಾಗೂ ಬೆಟಗೇರಿ ಬಡಾವಣೆ ಠಾಣೆಯ ಪರಶು ದೊಡ್ಡಮನಿ ಅಮಾನತುಗೊಂಡಿರುವ ಪೊಲೀಸ್ ಪೇದೆಗಳು. ಆ. 9ರಂದು ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್​ನಲ್ಲಿ ನಡೆಸಲಾಗುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಇವರಿಬ್ಬರು ದಾಳಿ ನಡೆಸಿ, ಜೂಜಾಟಕ್ಕಿಟ್ಟಿದ್ದ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪವಿದೆ. ನಂತರ ಈ ಪ್ರಕರಣವನ್ನೇ ಮುಚ್ಚಿ ಹಾಕಲಾಗಿತ್ತು ಎನ್ನಲಾಗಿದೆ.

ಬಡಾವಣೆ ಠಾಣೆ ವ್ಯಾಪ್ತಿಗೆ ಬರುವ ಈ ಹೋಟೆಲ್​ಗೆ ನಗರ ಠಾಣೆಯ ಪೇದೆ ಹನುಮಂತ ಯಡಿಯಾಪುರ್ ಯಾಕೆ ದಾಳಿ ನಡೆಸಿದ್ರು ಎನ್ನೋ ವಿಚಾರ ಪೊಲೀಸ್ ವಲಯದಲ್ಲೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಸದ್ಯ ಗದಗ ಎಸ್ಪಿ ಶ್ರೀನಾಥ್ ಜೋಶಿ ಈ ಇಬ್ಬರೂ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸೋ ಮೂಲಕ ಎಲ್ಲಾ ಅನುಮಾನಗಳಿಗೆ ಫುಲ್ ಸ್ಟಾಪ್‌ ಇಟ್ಟಿದ್ದಾರೆ.

Intro:

ಆಂಕರ್-ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿ ಹಣ ವಸೂಲಿ ಮಾಡಿ, ಈ ವಿಷಯ ಮುಚ್ಚಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿರೋ ಘಟನೆ ಗದಗನಲ್ಲಿ ನಡೆದಿದೆ. ಗದಗನ‌ ನಗರ ಠಾಣೆಯ ಹನುಮಂತ ಯಡಿಯಾಪುರ್ ಹಾಗೂ ಬೆಟಗೇರಿ ಬಡಾವಣೆ ಠಾಣೆಯ ಪರಶು ದೊಡ್ಡಮನಿ ಅಮಾನತಾಗಿರುವ ಪೊಲೀಸ್ ಪೇದೆಗಳಾಗಿದ್ದಾರೆ. ಆಗಷ್ಟ್ ೯ ರಂದು ನಗರದ ಪ್ರತಿಷ್ಠಿತ ಖಾಸಗೀ ಹೋಟೆಲ್ ನಲ್ಲಿ ನಡೆಸಲಾಗುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಇವರಿಬ್ಬರು ದಾಳಿ ನಡೆಸಿ, ಜೂಜಾಟಕ್ಕಿಟ್ಟಿದ್ದ ಹಣ ವಸೂಲಿ ಮಾಡಿದ್ರು. ನಂತರ ಈ ಪ್ರಕರಣವನ್ನೇ ಮುಚ್ಚಿ ಹಾಕಲಾಗಿತ್ತು. ಬಡಾವಣೆ ಠಾಣೆ ವ್ಯಾಪ್ತಿಗೆ ಬರುವ ಈ ಹೋಟೆಲ್ ಗೆ ನಗರ ಠಾಣೆಯ ಪೇದೆ ಹನುಮಂತ ಯಡಿಯಾಪುರ್ ಯಾಕೆ ದಾಳಿ ನಡೆಸಿದ್ರು ಎನ್ನೋ ವಿಚಾರ ಪೊಲೀಸ್ ವಲಯದಲ್ಲೇ ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು. ಗದಗ ಎಸ್ಪಿ ಶ್ರೀನಾಥ್ ಜೋಶಿ ಈ ಇಬ್ಬರೂ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸೋ ಮೂಲಕ ಎಲ್ಲಾ ಅನುಮಾನಗಳಿಗೆ ಫುಲ್ ಸ್ಟಾಪ್‌ ಇಟ್ಟಿದ್ದಾರೆ.

Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.