ಗದಗ : ಶಾಲೆಗೆ ಹೋಗುವ ವಿದ್ಯಾರ್ಥಿನಿ ಕೊಲೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಕೊಲೆ ಮಾಡಿದ ಆರೋಪಿ ಯಾರು ಎನ್ನುವ ಪ್ರಶ್ನೆ ಇಡೀ ಊರಿನಲ್ಲಿ ಆವರಿಸಿತ್ತು. ಕೊನೆಗೂ ವಿದ್ಯಾರ್ಥಿನಿಯ ಕೊಲೆಯ ರಹಸ್ಯ ಬಯಲಾಗಿದೆ.
ಕಿರಾತಕ ಬೇರೆ ಯಾರು ಅಲ್ಲ ಅವಳ ಗೆಳೆಯನೆ ಬಾಲಕಿಯನ್ನು ಅಮಾನುಷವಾಗಿ ಕೊಂದು ಹಾಕಿದ್ದ. ಒಂದು ಫೋನ್ ಕಾಲ್‌ನಿಂದ ಅವರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಣ್ಣದೊಂದು ಸುಳಿವು ಬಿಡದೇ ಕಿರಾತಕ ಎಸ್ಕೇಪ್ ಆಗಿದ್ದ. ಆದರೆ, ಈಗ ಗದಗ ಗ್ರಾಮೀಣ ಪೊಲೀಸರು ಮಾತ್ರ ಪಾಪಿ ಗೆಳೆಯನಿಗೆ ಹೆಡೆಮುರಿ ಕಟ್ಟಿದ್ದಾರೆ.
ಅಕ್ಟೊಬರ್ 25ರಂದು ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿ ಕೊಲೆ ಪ್ರಕರಣ ಇಡೀ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪೊಲೀಸರಿಗೂ ವಿದ್ಯಾರ್ಥಿನಿ ಕೊಲೆ ಪ್ರಕರಣ ಕಗ್ಗಂಟಾಗಿತ್ತು. ಮನೆಯಲ್ಲೇ ಬಾಲಕಿ ದುಪ್ಪಟ್ಟಾ, ಚಪ್ಪಲಿ ಪತ್ತೆಯಾಗಿದ್ದವು. ಹಾಗಾಗಿ, ಹೆತ್ತವರ ಮೇಲೆ ಗ್ರಾಮಸ್ಥರು, ಪೊಲೀಸರು ಅನುಮಾನ ಪಡುವಂತಾಗಿತ್ತು.
ಗದಗ ಎಸ್ಪಿ ಯತೀಶ್ ಬಾಲಕಿ ಕೊಲೆ ರಹಸ್ಯ ಬಯಲು ಮಾಡಲು ಸಿಪಿಐಗಳ ನೇತೃತ್ಬದಲ್ಲಿ ಮೂರು ತಂಡ ರಚನೆ ಮಾಡಿದ್ದರು. ಇಂದು ಕಿರಾತಕ ಕೊಲೆಗಾರರನ್ನು ಗದಗ ಗ್ರಾಮೀಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸಣ್ಣ ಸುಳುವಿನ ಜಾಡು ಹಿಡಿದುಕೊಂಡ ಹೋದ ಪೊಲೀಸರು ಕೊಲೆಗಾರನನ್ನು ಬಂಧಿಸಿದ್ದಾರೆ.
14 ವರ್ಷದ ಬಾಲಕಿ ಪೋಷಕರ ಸ್ಥಿತಿ ಕಡು ಬಡತನ. ಹಾಗಾಗಿ, ನಿತ್ಯ ತಂದೆ-ತಾಯಿ ದುಡಿಯಲು ಹೋಗುತ್ತಾರೆ. ಅಕ್ಟೊಬರ್ 23ರಂದು ಎಂದಿನಂತೆ ಹೆತ್ತವರು ದುಡಿಯಲು ಹೋಗಿದ್ದಾರೆ. ಬಾಲಕಿ ಹೆತ್ತವರು ದುಡಿಯೋಕೆ ಹೋಗಿದ್ದೇ ತಡ ಕೊಲೆಗಾರ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಅವರಿಬ್ಬರ ನಡುವೆ ಅದೇನ್ ಪ್ರೇಮವೋ.. ಬರೀ ಗೆಳತನವೋ ಗೋತ್ತಿಲ್ಲ.
ಇದನ್ನೂ ಓದಿ : ಗದಗದಲ್ಲಿ 14ರ ಹರೆಯದ ವಿದ್ಯಾರ್ಥಿನಿ ಕೊಲೆ: ಮುದ್ದಿನ ಮಗಳ ಕಳ್ಕೊಂಡು ಹೆತ್ತವರ ಆಕ್ರಂದನ
ಅವರಿಬ್ಬರೂ ಕೂಡಿದಾಗ ಒಂದು ಫೋನ್ ಕಾಲ್ ಬಂದಿದೆ. ಆಗ ಆತ ಫೋನ್ ಕಾಲ್ ಯಾರದ್ದು ಅಂತಾ ಪ್ರಶ್ನೆ ಮಾಡಿದ್ದಾನಂತೆ. ಈ ಕಾಲ್ ನಮ್ಮ ಸಂಬಂಧಿಕರುದ್ದು ಅಂದಿದ್ದಾಳೆ. ಆದರೆ, ಅನುಮಾನ ಬಂದು ಇಬ್ಬರು ಜಗಳವಾಡಿದ್ದಾರೆ.
ಆಗ ಕೋಪಗೊಂಡ ಹಂತಕ ಬಾಯಿಲ್ಲಿ ತನ್ನ ಟವೆಲ್ ತುರಿಕಿ, ಬಟ್ಟೆಯಿಂದ ಕತ್ತಿಗೆ ಬಿಗಿದು ಕೊಂದೆ ಹಾಕಿದ್ದಾನೆ. ಬಳಿಕ ಶವ ಮನೆಯಿಂದ 50 ಅಡಿ ದೂರದ ಶೆಡ್‌ನಲ್ಲಿ ಹಾಕಿ ಪರಾರಿಯಾಗಿದ್ದ. ಆದ್ರೆ, ಪೊಲೀಸರು ಪ್ರಕರಣ ಬೇಧಿಸಿ ಕಿರಾತಕನನ್ನು ಹೆಡೆಮರಿ ಕಟ್ಟಿದ್ದಾರೆ.
ಮನೆಯ ಪಕ್ಕದಲ್ಲೇ ಮುಳ್ಳಿನ ಪೊದೆಯೋಳಗೆ ಶವ ಪತ್ತೆ ಆಗಿರೋದ್ರಿಂದ ಪೊಲೀಸರಿಗೆ ಹತ್ತಾರು ಅನುಮಾನ ಬಂದಿದೆ. ಯಾವ ಫೋನ್ ಕಾಲ್‌ನಿಂದ ಕೊಲೆಯಾಗಿತ್ತು. ಅದೇ ಫೋನ್ ಆರೋಪಿಯನ್ನು ಹೆಡೆಮುರಿ ಕಟ್ಟಲು ಸಹಾಯಕವಾಗಿದೆ. ಸದ್ಯ ವಿದ್ಯಾರ್ಥಿನಿಗೆ ಆಗಿರುವ ಅನ್ಯಾಯಕ್ಕೆ ತಕ್ಕ ಶಿಕ್ಷೆ ಯಾಗಲಿ ಅಂತಾ ಗ್ರಾಮಸ್ಥರು ಒತ್ತಾಯ ಮಾಡ್ತಿದ್ದಾರೆ. ಇದ್ದ ಒಬ್ಬಳು ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.