ETV Bharat / state

ಸೋಲಾರ್​ ಕಂಪನಿಯ ಯಡವಟ್ಟು... ತನ್ನ ಜಮೀನಿಗೆ ಹೋದ ರೈತನಿಗೆ ಕಾದಿತ್ತು ಶಾಕ್​​!

author img

By

Published : Jun 12, 2019, 8:41 PM IST

Updated : Jun 12, 2019, 9:32 PM IST

ಗದಗ ತಾಲೂಕಿನ‌ ಹೊಲಕೋಟಿ ಕುರ್ತಕೋಟಿ ಗ್ರಾಮಕ್ಕೆ‌ ಹೊಂದಿಕೊಂಡಿರುವ ಬಸವರಾಜ್ ಗೊಬ್ಬರಗುಂಪಿ‌ ಅವರ ಜಮೀನಿನಲ್ಲಿ 8 ತಿಂಗಳ ಹಿಂದೆ ಎಂ ಪ್ಲಸ್ ಸೋಲಾರ್ ಕಂಪನಿ‌ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಿದೆ. ಇತ್ತೀಚೆಗೆ ಜಮೀನಿಗೆ ಬಂದಾಗ ನಿಜಕ್ಕೂ ಅವರಿಗೆ ಶಾಕ್ ಆಗಿದೆ.

Gadag

ಗದಗ: ತನ್ನ ಜಮೀನಿನಲ್ಲಿ ಅನುಮತಿ ಇಲ್ಲದೆ ಸೋಲಾರ್ ಅಳವಡಿಸಿರೋ ಎಂ ಪ್ಲಸ್ ಸೋಲಾರ್ ಕಂಪನಿ ವಿರುದ್ಧ ರೈತನೊಬ್ಬ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಗದಗ ತಾಲೂಕಿನ‌ ಹೊಲಕೋಟಿ ಕುರ್ತಕೋಟಿ ಗ್ರಾಮಕ್ಕೆ‌ ಹೊಂದಿಕೊಂಡಿರುವ ಬಸವರಾಜ್ ಗೊಬ್ಬರಗುಂಪಿ‌ ಎಂಬುವರ ಜಮೀನಿನಲ್ಲಿ 8 ತಿಂಗಳ ಹಿಂದೆ ಎಂ ಪ್ಲಸ್ ಸೋಲಾರ್ ಕಂಪನಿ‌ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಿದೆ. ಇಲ್ಲಿಂದ 10 ಕಿ.ಮೀ. ದೂರದಲ್ಲಿ ವಾಸವಿರುವ ಬಸವರಾಜ್​, ಬೇಸಿಗೆಯಲ್ಲಿ ಮಳೆಯಾಗದ ಕಾರಣ ಜಮೀನಿಗೆ ಬಂದಿರಲಿಲ್ಲ. ಇತ್ತೀಚೆಗೆ ಜಮೀನಿಗೆ ಬಂದಾಗ ನಿಜಕ್ಕೂ ಅವರಿಗೆ ಶಾಕ್ ಆಗಿದೆ.

ರೈತನ ಜಮೀನಿನಲ್ಲಿ ಸೋಲಾರ್​ ಘಟಕ!

ಎಂ ಪ್ಲಸ್ ಸೋಲಾರ್‌ ಕಂಪನಿಯು ತನ್ನ ಜಮೀನನ್ನು ಅತಿಕ್ರಮಣ ಮಾಡಿ, ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿದೆ ಎಂಬುದು ಬಸವರಾಜ್ ಆರೋಪ. ಈ ಬಗ್ಗೆ ಬಸವರಾಜ್​ ಕಂಪನಿಯವರನ್ನು ಪ್ರಶ್ನಿಸಿದರೆ, ನಮ್ಮ ಬಳಿ ನಿಮ್ಮ ಜಮೀನಿನ‌ ಕರಾರು ಪತ್ರ ಇದೆ ಎಂದು ದೌರ್ಜನ್ಯ ಎಸಗಿದರು ಎಂದು ಆಪಾದಿಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಬಸವರಾಜ್, ಐದು ವರ್ಷಗಳಿಂದ ಬರದ ಬೇಗೆಯಲ್ಲಿ ಬೆಂದಿದ್ದೇನೆ. ಇದೀಗ ಜಮೀನಿಗೂ ಸಂಚಕಾರ ಬಂದಿದೆ. ಕುರ್ತಕೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 270ರ 7 ಎಕರೆ ಜಮೀನನ್ನು ಎಂ ಪ್ಲಸ್ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಶಪಡಿಸಿಕೊಂಡಿದೆ. ನನ್ನ ಅಪ್ಪಣೆ ಇಲ್ಲದೆ ಜಮೀನಿಗೆ ಎಂ ಪ್ಲಸ್ ಸೋಲಾರ್ ಕಂಪನಿ ಕಂಪೌಂಡ್ ಹಾಕಿದೆ. ಇದನ್ನು ಕೇಳೋಕೆ ಹೋದರೆ ಕಾವಲುಗಾರರನ್ನು ಬಿಟ್ಟು ಗೂಂಡಾಗಿರಿ ಮಾಡ್ತಾರೆ ಎಂದಿದ್ದಾರೆ.

ತಮಗಾಗಿರುವ ಅನ್ಯಾಯದ ಕುರಿತು ರೈತನ ಸಹೋದರ ಮತ್ತು ಸಂಬಂಧಿಗಳು ವಿಎ, ತಹಶೀಲ್ದಾರ್ ಅವರಿಂದ ಹಿಡಿದು ಗದಗ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದಾರೆ.

ಜಮೀನುವಾಪಸ್​ ಮಾಡ್ತೇವೆ:

ಎಂ ಪ್ಲಸ್ ಸೋಲಾರ್ ಕಂಪನಿಯ ಅಧಿಕಾರಿ ಮನೋಹರ್ ಮಾತನಾಡಿ, ನಿಖರ ಮಾಹಿತಿ ಪಡೆದೇ ಅಲ್ಲಿ ಘಟಕಗಳನ್ನು ಅಳವಡಿಸಲಾಗಿತ್ತು. ಇದೆಲ್ಲಾ ಮುಗಿದ ನಂತರ ರೈತ ತಕರಾರು ತೆಗೆದು, ಜಮೀನು ನಮ್ಮ ಹೆಸರಿನಲ್ಲಿದೆ. ನಾವು ಒಪ್ಪಿಗೆ ಕೊಟ್ಟಿಲ್ಲ ಎಂದು ಹೇಳ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ನಂತರ ನಮ್ಮ ಕಡೆಯಿಂದ ತಪ್ಪಾಗಿರುವುದು ಗೊತ್ತಾಗಿದೆ. ತಕ್ಷಣ ಘಟಕಗಳನ್ನು ತೆರವುಗೊಳಿಸಿ, ಜಮೀನು ರೈತರಿಗೆ ಒಪ್ಪಿಸಲಾಗುವುದು ಎಂದಿದ್ದಾರೆ.

Intro:ಆಂಕರ್-ಅದು ಇಡೀ ರಾಜ್ಯಕ್ಕೆ‌ ಬೆಳಕು ಕೊಡುವಲ್ಲಿ ತನ್ನದೇ ಪಾತ್ರ ವಹಿಸಿರೋ ಸೋಲಾರ್ ವಿದ್ಯುತ್‌ ಕಂಪನಿ. ಆದ್ರೆ ರಾಜ್ಯಕ್ಕೆ ಬೆಳಕು ಕೊಡೋಕೆ ಆ ಸೋಲಾರ್ ಕಂಪನಿ, ಒಬ್ಬ ರೈತನ ಜಮೀನನ್ನು ಪರವಾನಿಗೆಯಿಲ್ಲದೆ ಅತಿಕ್ರಮಣ ಮಾಡಿರೋ ಆರೋಪ ಕೇಳಿಬಂದಿದೆ. ರಾತ್ರೋ ರಾತ್ರಿ ತನಗೇ ಗೊತ್ತಿಲ್ಲದೆ‌ ತನ್ನ ಜಮೀನಲ್ಲೆ ಸೋಲಾರ್ ಅಳವಡಿಸಿರೋ ಕಂಪನಿ ವಿರುದ್ಧವೀಗ ಆ ಜಮೀನು ಮಾಲೀಕ ಹೋರಾಟಕ್ಕೆ ಸಜ್ಜಾಗಿದ್ದಾನೆ.

Body:ಗದಗ ತಾಲೂಕಿನ‌ ಹೊಲಕೋಟಿ ಕುರ್ತಕೋಟಿ ಗ್ರಾಮಕ್ಕೆ‌ ಹೊಂದಿಕೊಂಡಿರೋ ಜಮೀನಲ್ಲಿ. ಹೊಸಳ್ಳಿ ಗ್ರಾಮದ ಬಸವರಾಜ್ ಗೊಬ್ಬರಗುಂಪಿ‌ ಎನ್ನೋರ ಜಮೀನು ಇಲ್ಲಿದ್ದು, ಕಳೆದ ೮ ತಿಂಗಳ ಹಿಂದೆ ಬಸವರಾಜ್ ಅವರ ಜಮೀನಲ್ಲಿ ಅವರಿಗೇ ಗೊತ್ತಿಲ್ಲದೆ ಎಂ ಪ್ಲಸ್ ಸೋಲಾರ್ ಕಂಪನಿ‌ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿದೆ. ಮಳೆಯಾಗದ ಕಾರಣ ಬಸವರಾಜ್ ಹಾಗೂ ಅವರ ಕುಟುಂಬ ತನ್ನೂರಿನಿಂದ ೧೦ ಕಿಲೋಮೀಟರ್ ದೂರದ ತಮ್ಮ ಜಮೀನಿಗೆ ಬಂದೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಎಂ ಪ್ಲಸ್ ಸೋಲಾರ್‌ ಕಂಪನಿ ಬಸವರಾಜ್ ಅವರ ಜಮೀನನ್ನು ಅತಿಕ್ರಮಣ ಮಾಡಿ ಅಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿದೆ. ವಿಷಯ ತಿಳಿದ ಬಸವರಾಜ್ ಹಾಗೂ ಅವರ ಕುಟುಂಬದವರು ಎಂಪ್ಲಸ್ ಕಂಪನಿಯವರ ಹತ್ತಿರ ಹೋದ್ರೆ ನಿಮ್ಮ ಜಮೀನಿನ‌ ಕರಾರು ಪತ್ರ ಇದೆ ಇಲ್ಲಿಂದ ಹೋಗಿ ಅಂತ ದೌರ್ಜನ್ಯ ಮಾಡಿದ್ದಾರಂತೆ. ಮಳೆಯಾಗಿಲ್ಲ ಎಂದು ವರ್ಷದಿಂದ ಹೊಲದ ಕಡೆ ಮುಖ ಮಾಡದ ಬಸವರಾಜನಿಗೆ ಎಂ ಪ್ಲಸ್ ಸೋಲಾರ್ ಕಂಪನ ಅಕ್ರಮವಾಗಿ ಭೂಮಿ ವಶಪಡಿಸಿಕೊಂಡು ಶಾಕ್ ನೀಡಿದೆ. ಕಪ್ಪು ಸುಂದರಿಯಂತೆ ಕಂಗೊಳಿಸುತ್ತಿದ್ದ ಜಮೀನಿನಲ್ಲಿ ಈಗ ಸೋಲಾರ್ ತಟ್ಟೆಗಳು ರಾರಾಜಿಸುತ್ತಿದ್ದು, ರೈತ ಬಸವರಾಜ್ ದಿಕ್ಕು ತೋಚದಂತಾಗಿದ್ದಾನೆ.

ಬೈಟ್೦೧-ಬಸವರಾಜ್, ಮೋಸಕ್ಕೊಳಗಾದ ರೈತ.

ಐದು ವರ್ಷದಿಂದ ಬರದ ಬೇಗೆಯಲ್ಲಿ ಬೇಯುತ್ತಿರೋ ಬಸವರಾಜನ ಹೊಲಕ್ಕೆ ಎಂ ಪ್ಲಸ್ ಸೋಲಾರ್ ಕಂಪನಿ ಕಂಪೌಂಡ್ ಹಾಕಿದ್ದಾರೆ. ಏನಪ್ಪ ಅಂತ‌ ಕೇಳೋಕೆ ಹೋದ್ರೆ ಕಾವಲುಗಾರರನ್ನು ಬಿಟ್ಟು ದಾದಾಗಿರಿ ಪ್ರದರ್ಶನ ಮಾಡಿದ್ದಾರಂತೆ. ಅಷ್ಟೇ ಅಲ್ಲ ಕೊಲೆ ಮಾಡೋ ಬೆದರಿಕೆಯನ್ನೂ ಸಹ ಹಾಕಿದ್ದಾರಂತೆ. ಕುರ್ತಕೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 270 ರ ಏಳು ಎಕರೆ ಜಮೀನನ್ನು ಎಂ ಪ್ಲಸ್ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಶಪಡಿಸಿಕೊಂಡಿದೆ. ಒಟ್ಟು 18 ಎಕರೆ ಕಾಂಪೌಂಡ್ ಹಾಕಿಕೊಂಡಿರುವ ಕಂಪನಿ ಅದರಲ್ಲಿ 13 ಎಕರೆಯನ್ನು ನಿಯಮಬದ್ಧವಾಗಿ ವಶಪಡಿಸಿಕೊಂಡಿದ್ದು, ಬಸವರಾಜರ ಏಳು ಎಕರೆಯನ್ನು ಅನುಮತಿ ಪಡೆಯದೆ ಸೋಲಾರ್ ಘಟಕವನ್ನು ಅಳವಡಿಸಿದೆ. ಇನ್ನು ವಿಷಯ ತಿಳಿಯದೇ ಹೊಲ ಸಜ್ಜುಗೊಳಿಸಲು ಬಂದ ಬಸವರಾಜ್ ಹಾಗೂ ಅವರ ಕುಟುಂಬದವರ ಮೇಲೆ ಕಂಪನಿಯ ಕೆಲಸಗಾರರು ಹಲ್ಲೆ ಯತ್ನ ಮಾಡಿದ್ದಾರಂತೆ. ಈ ಎಲ್ಲಾ ಬೆಳವಣಿಗೆ ಕುರಿತು ರೈತನ ಸಹೋದರ ಮತ್ತು ಸಂಬಂಧಿಗಳು ವಿಎ, ತಹಶೀಲ್ದಾರ್, ಗದಗ ಜಿಲ್ಲಾಧಿಕಾರಿ ಅವರಿಗೆ ಮಾಡಿದ್ದಾರಂತೆ.

ಬೈಟ್೦೨-ರಮೇಶ್, ಬಸವರಾಜ್‌ ಸಹೋದರ.

ಇನ್ನು ಈ‌ ಎಲ್ಲಾ ಬೆಳವಣಿಗೆ ಕುರಿತು ಎಂ ಪ್ಲಸ್ ಸೋಲಾರ್ ಕಂಪನಿಯ ಅಧಿಕಾರಿ ಮನೋಹರ್ ಅವರನ್ನು ಸಂಪರ್ಕಿಸಿದ್ರೆ, ಜಮೀನು ಎನ್‍ಎ ಆಗಿದೆ, ಘಟಕ ಅಳವಡಿಸಬಹುದು ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿ ಘಟಕಗಳನ್ನು ಅಳವಡಿಸಲಾಗಿದೆ. ಇದೆಲ್ಲಾ ಆದ ನಂತರ ರೈತ ತಕರಾರು ತೆಗೆದು, ಜಮೀನು ನಮ್ಮ ಹೆಸರಿನಲ್ಲಿದೆ, ನಾವು ಒಪ್ಪಿಗೆ ಕೊಟ್ಟಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿದ ನಂತರ ನಮ್ಮ ಕಡೆಯಿಂದ ತಪ್ಪಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಘಟಕಗಳನ್ನು ತೆರವುಗೊಳಿಸಿ, ಜಮೀನು ರೈತರಿಗೆ ಒಪ್ಪಿಸಲಾಗುವುದು ಅಂತಾರೆ.

Conclusion:ಇದನ್ನೆಲ್ಲಾ ಗಮನಿಸಿದರೆ ಬಲಾಢ್ಯರ ಬಲವಿಲ್ದೆ ಎಲ್ಲಿಂದಲೋ ಬಂದ ಸೋಲಾರ್ ಕಂಪನಿಯವರು ಹೀಗೆಲ್ಲಾ ಮಾಡೋದಕ್ಕೆ ಸಾಧ್ಯವಿಲ್ಲ ಎನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಏನೇ ಆಗ್ಲೀ ಜನರ‌ ಸೇವೆ ಮಾಡಲೆಂದೇ ಇರೋ‌ ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಸವರಾಜ್ ಅವರದಷ್ಟೇ ಅಲ್ದೆ ಯಾವ್ಯಾವ ರೈತರಿಗೆ ಅನ್ಯಾಯವಾಗಿದೆಯೋ ಅವರಿಗೆಲ್ಲಾ ನ್ಯಾಯ ಒದಗಿಸಬೇಕಾಗಿದೆ....
Last Updated : Jun 12, 2019, 9:32 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.