ETV Bharat / state

ಲಾಕ್​ಡೌನ್​ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..!

author img

By

Published : Jul 25, 2020, 6:28 PM IST

ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬಸಪ್ಪ ಹುಗ್ಗಿ ಎಂಬ ರೈತ, ಮನೆಯಂಗಳದಲ್ಲಿ ವಿವಿಧ ರೀತಿಯ ತರಕಾರಿ ಬೆಳೆದು ಪ್ರತಿನಿತ್ಯ 100 ರಿಂದ 200 ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

A farmer grows Vegetables  during lockdown
ಲಾಕ್​ಡೌನ್​ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..!

ಗದಗ: ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬಸಪ್ಪ ಹುಗ್ಗಿ ಎಂಬ ರೈತ, ಮನೆಯಂಗಳದಲ್ಲಿ ವಿವಿಧ ರೀತಿಯ ತರಕಾರಿ ಬೆಳೆದು ಯಶಸ್ವಿಯಾಗಿದ್ದಾರೆ.

ಶಿಗ್ಲಿ ಗ್ರಾಮದಲ್ಲಿ ಕೆಲವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಗ್ರಾಮವನ್ನು ಸೀಲ್​ಡೌನ್​ ಮಾಡಲಾಗಿತ್ತು. ಈ ವೇಳೆ ಸ್ಥಳೀಯರಿಗೆ ತರಕಾರಿ ಅಭಾವ ಉಂಟಾಗಿತ್ತು. ಹೀಗಾಗಿ ತರಕಾರಿ ಬೆಳೆಯಲು ಯೋಚಿಸಿದ ಬಸಪ್ಪ, ತಮ್ಮ ಮನೆಯ ಅಂಗಳದಲ್ಲೇ ಬದನೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ಹೀರೇಕಾಯಿ, ಅಲಸಂದೆ, ಹೆಸರುಕಾಳು, ಕೊತ್ತಂಬರಿ, ಹಾಗಲಕಾಯಿ, ಟೊಮ್ಯಾಟೊ, ಬೀನ್ಸ್, ವೀಳ್ಯದೆಲೆ ಹೀಗೆ ನಾನಾ ತರಹದ ಬೆಳೆಗಳನ್ನು ಬೆಳೆದಿದ್ದಾರೆ.

ಈ ತರಕಾರಿಗಳನ್ನು ಮಾರಿ ಪ್ರತಿನಿತ್ಯ 100 ರಿಂದ 200 ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಬಸಪ್ಪ ಅವರ ಕೈತೋಟ ನೋಡಿ ಗ್ರಾಮದ ಜನರು ಕೂಡ ಬೇಷ್​ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.