ETV Bharat / state

ಪ್ರವಾಹದಿಂದ ಮನೆ ಕುಸಿತ: ಹೃದಯಾಘಾತದಿಂದ ವೃದ್ಧೆ ಸಾವು - ಹೊಸಬೂದಿಹಾಳ

ಪ್ರವಾಹದಿಂದ ತಮ್ಮ ಮನೆ ಕಳೆದುಕೊಂಡ ದುಃಖದಲ್ಲಿದ್ದ ವೃದ್ಧೆಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವೃದ್ಧೆ ಸಾವು
author img

By

Published : Aug 18, 2019, 9:30 AM IST

ಗದಗ: ಪ್ರವಾಹಕ್ಕೆ ಸಿಲುಕಿ ಮನೆ ಕುಸಿದಿರುವುದನ್ನು ಕಂಡು ನೊಂದಿದ್ದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹೊಸಬೂದಿಹಾಳದ ಪರಿಹಾರ ಕೇಂದ್ರದಲ್ಲಿ ನಡೆದಿದೆ.

ನರಗುಂದ ತಾಲೂಕಿನ ಬೂದಿನಾಳ ಗ್ರಾಮದ ಹನುಮವ್ವ (62) ಮೃತ ವೃದ್ಧೆಯಾಗಿದ್ದಾರೆ. ಇವರು ಹೊಸಬೂದಿಹಾಳದ ಪರಿಹಾರ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪರಿಹಾರ ಕೇಂದ್ರದಲ್ಲಿದ್ದ ಅವರು ಪ್ರವಾಹ ಇಳಿದಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ್ದರು. ಆದರೆ ಅಲ್ಲಿ ತಾನು ವಾಸವಾಗಿದ್ದ ಮನೆ ಕುಸಿದು ಬಿದ್ದಿರುವುದನ್ನು ಕಂಡು ಮಾನಸಿಕವಾಗಿ ಕುಗ್ಗಿದ್ದರು.

ಹೃದಯಾಘಾತದಿಂದ ವೃದ್ಧೆ ಸಾವು

ಬಳಿಕ ಪರಿಹಾರ ಕೇಂದ್ರಕ್ಕೆ ಬಂದಿದ್ದ ಅವರು ಮನೆ ಕುಸಿದಿರುವ ದುಃಖದಲ್ಲೇ ಇದ್ದರು. ನಿನ್ನೆ ರಾತ್ರಿ ಪರಿಹಾರ ಕೇಂದ್ರದಲ್ಲೇ ಹೃದಯಾಘಾತಕ್ಕೊಳಗಾಗಿ ಹನುಮವ್ವ ಮೃತಪಟ್ಟಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ‌ ನಡೆದಿದೆ.

Intro:

ಆಂಕರ್-ಪ್ರವಾಹದಲ್ಲಿ ನೆಂದಿದ್ದ ತನ್ನ ಮನೆ ಕುಸಿದಿರೋದನ್ನು ಕಂಡ ವೃದ್ಧೆಯೊಬ್ಬರು, ಪರಿಹಾರ ಕೇಂದ್ರದಲ್ಲಿ ಮೃತಪಟ್ಟಿರೋ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನರಗುಂದ ತಾಲೂಕಿನ ಹೊಸಬೂದಿಹಾಳದ ಪರಿಹಾರ ಕೇಂದ್ರದಲ್ಲಿ ಈ ಘಟನೆ‌ ನಡೆದಿದ್ದು, ಮೃತ ವೃದ್ಧೆಯನ್ನು ೬೨ ವರ್ಷದ ಹನುಮವ್ವ ಎಂದು ಗುರುತಿಸಲಾಗಿದೆ. ಪ್ರವಾಹ ಇಳಿದಿರೋ ಪರಿಣಾಮ ತನ್ನ ಮನೆಯನ್ನು ನೋಡಲು ಹನುಮವ್ವ ಬೂದಿಹಾಳಕ್ಕೆ ತೆರಳಿದ್ರು. ಆದ್ರೆ ಅಲ್ಲಿ ತನ್ನ ಮನೆ ಕುಸಿದಿರೋದನ್ನು ಕಂಡು, ಮಾನಸಿಕವಾಗಿ ಕುಗ್ಗಿದ್ರು. ನಿನ್ನೆ ರಾತ್ರಿ ಹೊಸಬೂದಿಹಾಳದ ಪರಿಹಾರ ಕೇಂದ್ರದಲ್ಲಿ ಹೃದಯಾಘಾತಕ್ಕೊಳಗಾಗಿ ಹನುಮವ್ವ ಮೃತಪಟ್ಟಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ‌ ನಡೆದಿದೆ.

Body:ಗದಗConclusion:ಗದಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.