ETV Bharat / state

ಬಸ್​ ಸಂಚಾರ ಪ್ರಾರಂಭ: ಕರ್ತವ್ಯಕ್ಕೆ ಹಾಜರಾಗದ 22 ಜನ ಸಿಬ್ಬಂದಿಯ ವರ್ಗಾವಣೆ

author img

By

Published : Apr 12, 2021, 11:00 PM IST

ಗದಗ​ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಬಸ್​ಗಳು ಸಂಚಾರ ಮಾಡುತ್ತಿವೆ. ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಗ್ರಾಮೀಣ ಪ್ರದೇಶಗಳಿಗೆ ಬಸ್​ ಸಂಚಾರ ಆರಂಭವಾಗಿಲ್ಲ.

22-ksrtc-employees-transfer-in-gadag-depo
ಗದಗ ಸಾರಿಗೆ ನೌಕರರ ಪ್ರತಿಭಟನೆ

ಗದಗ: 6ನೇ ವೇತನ ಆಯೋಗ ಜಾರಿಗಾಗಿ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ನಡುವೆಯೂ ನಗರದ ಪಂ.ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಿಂದ ಸುಮಾರು 20 ಬಸ್​ ಸಂಚಾರ ಆರಂಭಗೊಂಡಿದೆ.

ಗದಗನ ಎಲ್ಲ ತಾಲೂಕುಗಳಿಗೆ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಬಸ್​ಗಳು ಸಂಚಾರ ಮಾಡುತ್ತಿವೆ. ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಗ್ರಾಮೀಣ ಪ್ರದೇಶಗಳಿಗೆ ಬಸ್​ಗಳು ಸಂಚಾರ ಆರಂಭವಾಗಿಲ್ಲ.

ಕರ್ತವ್ಯಕ್ಕೆ ಹಾಜರಾಗದ ನೌಕರರ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ಸುಮಾರು 22 ಸಿಬ್ಬಂದಿಯನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದೆ. ಈಗಾಗಲೇ ವರ್ಗಾವಣೆ ಆದೇಶ ಪತ್ರಗಳನ್ನ ಮುಷ್ಕರ ನಿರತ ಸಿಬ್ಬಂದಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಒತ್ತಡ ಹೇರಿ ನಮ್ಮ ಮುಷ್ಕರ ಹತ್ತಿಕ್ಕುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಸಿಬ್ಬಂದಿ ಆರೋಪ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.