ETV Bharat / state

ಗದಗ; ಇಬ್ಬರಲ್ಲಿ ಸೋಂಕು ಪತ್ತೆ.. ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆ

author img

By

Published : Jun 20, 2020, 10:33 PM IST

ಇಂದು ಹರ್ತಿ ಗ್ರಾಮದ 81 ವರ್ಷದ ವೃದ್ಧ ಹಾಗೂ 24 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ ಜಿಲ್ಲೆಯಲ್ಲಿ ಒಟ್ಟು 60 ಸೋಂಕಿತರ ಪೈಕಿ, 44 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ.

Gadag corona case
Gadag corona case

ಗದಗ: ಜಿಲ್ಲೆಯಲ್ಲಿಂದು 2 ಹೊಸ ಕೊರೊನಾ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.

ತಾಲೂಕಿನ ಹರ್ತಿ ಗ್ರಾಮದ 81 ವರ್ಷದ ವೃದ್ಧ ಹಾಗೂ 24 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಇಬ್ಬರಿಗೂ ಧಾರವಾಡ ಮೂಲದ ಪಿ-6255 (45 ವರ್ಷ)ರವರ ಸಂಪರ್ಕದಿಂದ ಸೋಂಕು ತಗುಲಿದೆ.

ಪಿ-6255 ಇವರು ಧಾರವಾಡದಿಂದ ತಮ್ಮ ಪತ್ನಿಯ ತವರು ಮನೆ (ಹರ್ತಿ ಗ್ರಾಮಕ್ಕೆ)ಗೆ ದಿನಾಂಕ 06-06-2020ರಂದು ಆಗಮಿಸಿದ್ದರು. ಬಳಿಕ ದಿನಾಂಕ 12 ರಂದು ಪಿ-6255ಗೆ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ, ಅವರೆಲ್ಲರನ್ನೂ ನಿಗಾದಲ್ಲಿರಿಸಿ, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಹರ್ತಿ ಗ್ರಾಮದ ಈ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಸದ್ಯ ಈ ಇಬ್ಬರು ಸೋಂಕಿತರನ್ನು ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 60 ಸೋಂಕಿತರ ಪೈಕಿ, 44 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ. ಸದ್ಯ 14 ಜನ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.