ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ 12 ಕೊರೊನಾ ಪಾಸಿಟಿವ್ ಕೇಸ್ಗಳು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 116 ಕ್ಕೆ ಏರಿಕೆಯಾಗಿದೆ.
P-10600 25 ವರ್ಷದ ಪುರುಷ, P-10601 13 ವರ್ಷದ ಬಾಲಕ, P-10602 26 ವರ್ಷದ ಮಹಿಳೆ, P-10603 23 ವರ್ಷದ ಮಹಿಳೆ, P-10604 22 ವರ್ಷದ ಮಹಿಳೆ, P-10605 25 ವರ್ಷದ ಮಹಿಳೆ, P-10606 80 ವರ್ಷದ ಮಹಿಳೆ, P-10607 26 ವರ್ಷದ ಪುರುಷ, P-10608 26 ವರ್ಷದ ಪುರುಷ , P-10609 27 ವರ್ಷದ ಪುರುಷP-10610 35 ವರ್ಷದ ಪುರುಷ ಸೋಂಕಿತರು.
ಕಾಲೋನಿಯ 13 ವರ್ಷದ ಹುಡುಗ P-10601, 25 ವರ್ಷದ ಪುರುಷ P-10600, ಡಂಬಳ ಗ್ರಾಮದ ಇರ್ವರಿಗೆ 26 ವರ್ಷದ ಪುರುಷ P-10608 ಹಾಗೂ 27 ವರ್ಷದ ಪುರುಷ P-10609 ಇವರಿಗೆ ಸೋಂಕು ದೃಢವಾಗಿದೆ. ಶಿರಹಟ್ಟಿ ತಾಲ್ಲೂಕಿನ ಮಜ್ಜೂರುತಾಂಡ ನಿವಾಸಿ 29 ವರ್ಷದ ಮಹಿಳೆ P-8723 ಸೋಂಕಿತರ ಸಂಪರ್ಕದಿಂದಾಗಿ ಇಬ್ಬರಿಗೆ ಸೋಂಕು ದೃಢ ಪಟ್ಟಿದ್ದು, ಶಿರಹಟ್ಟಿ ಪಟ್ಟಣದ 23 ವರ್ಷದ ಮಹಿಳೆ P-10603 ಮತ್ತು 25 ವರ್ಷದ ಮಹಿಳೆ P-10605 ಸೋಂಕು ದೃಢವಾಗಿದೆ. ಗದಗಿನ ಸೆಟಲ್‍ಮೆಂಟ್ ಪ್ರದೇಶ ನಿವಾಸಿಗಳಾದ P-7387 ಮತ್ತು P-7388 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 26 ವರ್ಷದ ಮಹಿಳೆ P-10602, ಹರ್ತಿ ಗ್ರಾಮದ 40 ವರ್ಷದ ಪುರುಷ P-7832 ಸಂಪರ್ಕದಿಂದಾಗಿ ಗದಗ ತಾಲ್ಲೂಕಿನ ಯಲಿಶಿರುಂದ ಗ್ರಾಮದ 80 ವರ್ಷದ ಮಹಿಳೆ P-10606 ಸೋಂಕು ದೃಢವಾಗಿದೆ.
ಶಿರಹಟ್ಟಿ ಪಟ್ಟಣದ 30 ವರ್ಷದ ಪುರುಷ P-8724 ಸಂಪರ್ಕದಿಂದಾಗಿ ಶಿರಹಟ್ಟಿ ಪಟ್ಟಣದ ಮ್ಯಾಗೇರಿ ಓಣಿಯ 26 ವರ್ಷದ ಪುರುಷ P-10607 ಗದಗಿನ ಸಿದ್ಧರಾಮೇಶ್ವರ ನಗರದ 30 ವರ್ಷದ ಪುರುಷ P-10148 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 35 ವರ್ಷದ ಪುರುಷ P-10610 ಇವರಿಗೆ ಸೋಂಕು ದೃಢವಾಗಿದೆ.
ಗುಜರಾತ್ ರಾಜ್ಯದ ಅಹಮದಾಬಾದ್‍ದಿಂದ ಆಗಮಿಸಿದ ಶಿರಹಟ್ಟಿ ಪಟ್ಟಣದ 22 ವರ್ಷದ ಮಹಿಳೆ P-10604 ಹಾಗೂ ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದ 19 ವರ್ಷದ ಯುವಕ P-10611 ಇವರಿಗೆ ಇನ್‍ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ಇರುವುದು ದೃಢವಾಗಿದೆ.
ಇವರೆಲ್ಲರಿಗೂ ಗದಗ ನಿಗದಿತ ಜಿಮ್ಸ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.