ಹುಬ್ಬಳ್ಳಿ(ಧಾರವಾಡ): ಸೋಂಕು ಮುಕ್ತನಾದ ಉಪನಗರ ಠಾಣೆ ಪೊಲೀಸ್ ಕಾನ್ಸ್ಟೇಬಲ್ಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಯಾದ ಉಪನಗರ ಠಾಣೆ ಕ್ರೈಂ ವಿಭಾಗದ ಕಾನ್ಸ್ಟೇಬಲ್ ಅವರನ್ನು ಯುವ ಮುಖಂಡ ಮಂಜುನಾಥ ಹೆಬಸೂರು ಹಾಗೂ ಗೆಳೆಯರು ಶಾಲು ಹೊದಿಸಿ, ಹೂಗುಚ್ಚ ನೀಡಿ ಸ್ವಾಗತಿಸಿದರು.
ಅವಳಿ ನಗರದಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನದ ವೇಳೆ ಈ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿತ್ತು.