ಹುಬ್ಬಳ್ಳಿ: ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಯುವಕರು ಆಚರಿಸಿದರು.
ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮುಂಜಾಗೃತೆಯಾಗಿ ಯಾವುದೇ ಜಯಂತಿಯನ್ನು ಆಚರಿಸದಿರುವಂತೆ ಸರ್ಕಾರದ ಆದೇಶವಿದೆ. ಈ ಹಿನ್ನೆಲೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸಂಘಟನೆ ಅಧ್ಯಕ್ಷ ಜಗದೀಶ ಬಳ್ಳಾರಿ ನೇತೃತ್ವದಲ್ಲಿ ಜೈ ಭೀಮ್ ಅಹಿಂದ ಯುವಕ ಸಂಘದ 47 ಸದಸ್ಯರು ರಕ್ತದಾನದ ಮೂಲಕ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.