ETV Bharat / state

'‌ಮೈ ಅಬ್ ಮರ್ತಾ ಹು': ಸ್ನೇಹಿತನಿಗೆ ವಾಟ್ಸ್​ಪ್​ ಸಂದೇಶ ಕಳಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ - Young women's family refusal to marry

ಕೆಲವು ದಿನಗಳಿಂದ ಯುವತಿವೋರ್ವಳನ್ನು ಪ್ರೀತಿಸುತ್ತಿದ್ದ ಯುವಕ ಈಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯುವತಿ ಮನೆಯವರು ಇವರ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ '‌ಮೈ ಅಬ್ ಮರ್ತಾ ಹು' ಎಂದು ಸ್ನೇಹಿತನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಈ ದುಡುಕು ನಿರ್ಧಾರ ಕೈಗೊಂಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ.

attempt-to-suicide
ಆತ್ಮಹತ್ಯಾ ಯತ್ನ
author img

By

Published : Nov 19, 2020, 7:12 AM IST

ಹುಬ್ಬಳ್ಳಿ: ಮದುವೆಯಾಗಲು ಯುವತಿ ‌ಮನೆಯವರು ಒಪ್ಪಲಿಲ್ಲವೆಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಖಸಾಯಿ ಓಣಿಯಲ್ಲಿ ನಡೆದಿದೆ.

30ವರ್ಷದ ಶಾಯಿಕ್​(ಹೆಸರು ಬದಲಾಯಿಸಲಾಗಿದೆ)​ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಕೆಲವು ದಿನಗಳಿಂದ ಯುವತಿವೊರ್ವಳನ್ನು ಪ್ರೀತಿಸುತ್ತಿದ್ದ. ತನ್ನ ಪ್ರೇಯಸಿಯ ಮನೆಯವರ ಎದುರು ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಆಕೆ ಕುಟುಂಬಸ್ಥರು ಈತನ ಪ್ರಸ್ತಾಪ ತಳ್ಳಿ ಹಾಕಿದ್ದರಿಂದ ಮನನೊಂದ ಶಾಯಿಕ್​ 'ಮೈ ಅಬ್ ಮರ್ತಾ ಹು' ಎಂದು ತನ್ನ ಸ್ನೇಹಿತನಿಗೆ ವಾಟ್ಸ್​ಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮನನೊಂದ ಯುವಕ ಆತ್ಮಹತ್ಯೆ ಯತ್ನ

ಕೂಡಲೇ ಯುವಕನ ‌ಮನೆಗೆ ಧಾವಿಸಿದ ಸ್ನೇಹಿತರು ನೇಣಿನ ಕುಣಿಕೆಯಲ್ಲಿ ಬಿದ್ದಿದ್ದ ಈತನನ್ನು ರಕ್ಷಿಸಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕಸಬಾ ಪೇಟೆ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.