ETV Bharat / state

ಉಚಿತವಾಗಿ ಮಕ್ಕಳಿಗೆ ಮನೆ ಪಾಠ ಮಾಡುತ್ತಿರುವ ಯುವಕ: ಗ್ರಾಮಸ್ಥರಿಂದ ಮೆಚ್ಚುಗೆ - ಹುಬ್ಬಳ್ಳಿ ಸುದ್ದಿ

ಕಲಘಟಗಿ‌ ತಾಲೂಕಿನ ಮಿಶ್ರೀಕೋಟಿ ಗ್ರಾಮದ ಈರಪ್ಪ ನಾಯ್ಕರ್ ಎಂಬ ಯುವಕ ಮಕ್ಕಳಿಗೆ ಉಚಿತ ಮನೆ ಪಾಠ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುತ್ತಿದ್ದಾರೆ.

ಉಚಿತವಾಗಿ ಮಕ್ಕಳಿಗೆ ಮನೆಪಾಠ ಮಾಡುತ್ತಿರುವ ಯುವಕ

author img

By

Published : Sep 2, 2020, 2:11 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ‌ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಹೀಗಾಗಿ ಇಲ್ಲೊಬ್ಬ ಯುವಕಬ್ಬ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿದ್ದಾರೆ.

ಕೊರೊನಾ ವೈರಸ್​​ನಿಂದ ಆನ್​ಲೈನ್​ ಶಿಕ್ಷಣ ಜಾರಿಯಾಯ್ತು. ಮೊಬೈಲ್ ಇಲ್ಲದವರಿಗೆ ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೆ ತಂದರೂ ಕೇವಲ 1 ತಾಸಿನಲ್ಲಿ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ‌ ಕಲಘಟಗಿ‌ ತಾಲೂಕಿನ ಮಿಶ್ರೀಕೋಟಿ ಗ್ರಾಮದ ಈರಪ್ಪ ನಾಯ್ಕರ್ ಎಂಬ ಯುವಕ ಮಕ್ಕಳಿಗೆ ಉಚಿತ ಮನೆ ಪಾಠ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುತ್ತಿದ್ದಾರೆ.

ಉಚಿತವಾಗಿ ಮಕ್ಕಳಿಗೆ ಮನೆ ಪಾಠ ಮಾಡುತ್ತಿರುವ ಯುವಕ

ಈರಪ್ಫ ನಾಯ್ಕರ್ ಸದ್ಯ ಕನಕದಾಸ ಶಿಕ್ಷಣ ಸಮಿತಿ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ ಮೊದಲ ಸೆಮಿಸ್ಟರ್ ಮುಗಿಸಿದ್ದಾರೆ. ಸದ್ಯ ಕಾಲೇಜು ರಜೆ ಇರುವ ಕಾರಣ ಮಿಶ್ರೀಕೊಟಿ ಗ್ರಾಮದ ಮಕ್ಕಳಿಗೆ ಉಚಿತವಾಗಿ ಮನೆ ಪಾಠದ ಜೊತೆ ಛದ್ಮವೇಷ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಮಕ್ಕಳಿಗೆ ವಿದ್ಯೆಯ ಜೊತೆಗೆ ದೇಶಾಭಿಮಾನ ಬೆಳೆಸುತ್ತಿರುವುದು ವಿಶೇಷವಾಗಿದೆ.

ಬೆಳಗ್ಗೆ ಹಾಗೂ ಸಂಜೆ ದಿನಕ್ಕೆ ಎರಡು ಗಂಟೆಗಳ ಕಾಲ ಮನೆ ಪಾಠ ಮಾಡುತ್ತಿದ್ದಾರೆ.‌ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮ ಸಾಮಾಜಿಕ ಅಂತರ ನಿಯಮದಂತೆ ಒಂದು ಬಾರಿ ಮೂರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಈ ಯುವಕನ ಹತ್ತಿರ 20ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಭಾಗಿಯಾಗಿದ್ದು ಗ್ರಾಮಸ್ಥರಿಗೆ ಸಂತಸ ತಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.