ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ 7ನೇ ಆರೋಪಿ ಸಂತೋಷ ಸವದತ್ತಿಗೆ ಜಾಮೀನು ಮಂಜೂರಾಗಿದೆ.
ಕಳೆದ ನವೆಂಬರ್ 20ರಂದು ಆರೋಪಿ ಸಂತೋಷನನ್ನು ಸಿಬಿಐ ಬಂಧಿಸಿ, ಧಾರವಾಡದ 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಂತರ ತಲಾ 1 ಲಕ್ಷ ರೂಪಾಯಿ, ಎರಡು ಶ್ಯೂರಿಟಿ ಪಡೆದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ. ಜೊತೆಗೆ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಹಾಗೂ ವಿಚಾರಣೆ ದಿನಾಂಕ ತಪ್ಪಿಸದಂತೆ ನ್ಯಾಯಾಲಯ ಷರತ್ತು ವಿಧಿಸಿದೆ.