ETV Bharat / state

ಜಯಮೃತ್ಯುಂಜಯ ಸ್ವಾಮೀಜಿಗೆ ಆತ್ಮಸಾಕ್ಷಿ ಇದ್ದರೆ ನಮ್ಮ ಮನೆಗೂ ಬರಲಿ; ಯೋಗೇಶ್ ಗೌಡ ತಾಯಿ - Yogesh Gowda murder case

ಯೋಗೇಶ್​ ಗೌಡ ಕೇಸ್‌ನಲ್ಲಿ ಈಗ ಎರಡು ದಿನಗಳಿಂದ ನೀವು ಆಸಕ್ತಿ ತೋರುತ್ತಿದ್ದಿರಾ.. ಇದು ನನಗೆ ದುಃಖ ಮತ್ತು ಆಶ್ಚರ್ಯ ತಂದಿದೆ ಎಂದು ಯೋಗೇಶ್​ ಗೌಡ ತಾಯಿ ಜಯಮೃತ್ಯುಂಜಯ ಸ್ವಾಮೀಜಿಗೆ ಬಹಿರಂಗ ಪತ್ರ ಬರೆದಿದ್ದಾರೆ.

Yogesh Gowda
ಯೋಗೇಶ್​ ಗೌಡ
author img

By

Published : Nov 6, 2020, 8:40 PM IST

ಧಾರವಾಡ: ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗೆ ಮೃತ ಯೋಗೇಶ್​ ಗೌಡ ತಾಯಿ ಬಹಿರಂಗ ಪತ್ರ ಬರೆದಿದ್ದಾರೆ.

ಮೃತ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಈಗ ಎರಡು ದಿನಗಳಲ್ಲಿ ಸ್ವಾಮೀಜಿ ಆಸಕ್ತಿ ತೋರುತ್ತಿರುವುದು ನನಗೆ ದುಃಖವಾಗಿದೆ. ನಾನು, ನನ್ನ ಪತಿ ಮತ್ತು ನಮ್ಮ ಪೂರ್ವಜರು ಹಿಂದೂ ಲಿಂಗಾಯತ ಪಂಚಮಸಾಲಿ ಧರ್ಮವನ್ನು ಪಾಲಿಸುತ್ತಿದ್ದೇವೆ ಎಂದು ತಾಯಿ ತುಂಗವ್ವ ಗೌಡರ್‌ ಸೇರಿದಂತೆ ಅವರ ಕುಟುಂಬ ಸದಸ್ಯರು ಜಯ ಮೃತ್ಯುಂಜಯ ಸ್ವಾಮೀಜಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ‌ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಈ ಹಿನ್ನೆಲೆ ಸ್ವಾಮೀಜಿಗೆ ಮೃತ ಯೋಗೇಶ್ ಗೌಡ ತಾಯಿ ತುಂಗವ್ವ ಗೌಡರ್​ ಪತ್ರ ಬರೆದಿದ್ದಾರೆ.

letter
ಯೋಗೇಶ್​ ಗೌಡ ತಾಯಿ ಬರೆದಿರುವ ಪತ್ರ

ಯೋಗೇಶ್​ ಗೌಡ ಕೇಸ್‌ನಲ್ಲಿ ಈಗ ಎರಡು ದಿನಗಳಿಂದ ನೀವು ಆಸಕ್ತಿ ತೋರುತ್ತಿದ್ದಿರಾ ಇದು ನನಗೆ ದುಃಖ ಮತ್ತು ಆಶ್ಚರ್ಯ ತಂದಿದೆ. ನಾವು ಪೂರ್ವಜರ ಕಾಲದಿಂದಲೂ ಲಿಂಗಾಯತ ಪಂಚಮಸಾಲಿ ಧರ್ಮ ಪಾಲಿಸಿಕೊಂಡು ಬಂದಿದ್ದೇವೆ.‌ ನಾವೂ ಕೂಡ ನಿಮ್ಮ ಮಠದ ನಿಷ್ಠ ಭಕ್ತರಾಗಿದ್ದೇವೆ ಎಂದು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

ಯೋಗೇಶ್​ ಗೌಡ ಜೀವಂತ ಇದ್ದಾಗ ನೀವು ಎರಡು ಸಲ‌ ಮನೆಗೆ ಬಂದಿದ್ದೀರಿ. ಆದರೆ ಯೋಗೇಶ್​ ಗೌಡ ಕೊಲೆಯಾದಾಗ ಒಮ್ಮೆಯೂ ಮನೆಗೆ ಬರಲಿಲ್ಲ, ದೂರವಾಣಿಯಲ್ಲಿಯೂ ಸುಖ-ದುಃಖ ವಿಚಾರ ಮಾಡಲಿಲ್ಲ, ನಿಮಗೆ ಆತ್ಮಸಾಕ್ಷಿ ಇದ್ದರೆ ನಮ್ಮ ಮನೆಗೂ ಬಂದು ಬಡ ಭಕ್ತರ ಕಷ್ಟ ಕೇಳಿ ಎಂದ ತುಂಗಮ್ಮ‌ ಗೌಡ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.