ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯೋಗೇಶ್ ಗೌಡ ಪತ್ನಿ ಸಿಬಿಐ ವಿಚಾರಣೆಗೆ ಆಗಮಿಸಿದ್ದಾರೆ.
ನಿನ್ನೆಯಿಂದ ನಗರದ ಸಿಎಆರ್ ಮೈದಾನದಲ್ಲಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ನಡೆಸಿದ್ದಾರೆ. ಇಂದು ಯೋಗೇಶ್ ಗೌಡ ಪತ್ನಿಯನ್ನು ವಿಚಾರಣೆಗೆ ಕರೆದಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಪತಿ ಕೊಲೆಯಾದ ಮೇಲೆ ಮಲ್ಲಮ್ಮ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಹೀಗೆ ಕಾಂಗ್ರಸ್ ಪಕ್ಷ ಸೇರಲು ಮಲ್ಲಮ್ಮ 2 ಕೋಟಿ ರೂ. ಹಣ ಪಡೆದಿದ್ದರು ಎಂದು ಹೇಳಲಾಗುತ್ತಿದ್ದು, ಈ ಕುರಿತು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿಯ ಸೋದರಮಾವ ಚಂದ್ರ ಶೇಖರ ಇಂಡಿ ಸಹ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸತತ ಎರಡು ದಿನ ವಿಚಾರಣೆಗೆ ಚಂದ್ರಶೇಖರ ಇಂಡಿ ಆಗಮಿಸಿದ್ದಾರೆ.