ETV Bharat / state

ಯೋಗೀಶ್​​ ಗೌಡ ಹತ್ಯೆ ಪ್ರಕರಣ: ಸಿಬಿಐನಿಂದ ಮತ್ತಿಬ್ಬರ ವಿಚಾರಣೆ - ಯೋಗೀಶ ಗೌಡ ಹತ್ಯೆ ಪ್ರಕರಣ

ಯೋಗೀಶ್​​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮತ್ತಿಬ್ಬರ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Yogesh Gowda
ಯೋಗೀಶ ಗೌಡ
author img

By

Published : Mar 20, 2020, 4:34 PM IST

ಧಾರವಾಡ: ಜಿಲ್ಲಾ ಪಂಚಾಯತ್​ ಸದಸ್ಯರಾಗಿದ್ದ ಯೋಗೀಶ್​​ ಗೌಡ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು‌ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದಾರೆ.

ಧಾರವಾಡದ ಉಪನಗರ ಠಾಣೆಯಲ್ಲಿ‌ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಗಂಟೆಯಿಂದ ವಿಚಾರಣೆ‌ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಉದಯ್​ ಜಿಮ್ ಟ್ರೈನರ್ ವಿವೇಕ ದಳವಾಯಿ ಹಾಗೂ ಹುಬ್ಬಳ್ಳಿ ಮೂಲದ ಹೋಟೆಲ್ ಮಾಲೀಕರ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹತ್ಯೆ ನಂತರ ನಡೆದ ಘಟನೆಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಯೋಗೀಶ್​​ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.