ಹುಬ್ಬಳ್ಳಿ: ಯೋಗದಿಂದ ಮಾತ್ರವೇ ಮಾರಕ ರೋಗಗಳಿಂದ ಮುಕ್ತಿ ಹೊಂದಲು ಸಾಧ್ಯ. ಪ್ರತಿಯೊಬ್ಬರು ಕೂಡ ಯೋಗದ ಸಹಾಯದಿಂದ ರೋಗ ಮುಕ್ತ ಜೀವನ ನಡೆಸಿ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಸಲಹೆ ನೀಡಿದ್ರು.
ನಗರದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಯೋಗ ಮನುಕುಲಕ್ಕೆ ಒಂದು ವರದಾನ, ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ದಾರಿದ್ರ್ಯ ನಿವಾರಣೆಗೆ ಯೋಗವೊಂದು ಪೂರಕ ವೇದಿಕೆಯಾಗಿದೆ ಎಂದರು. ಇದೇ ವೇಳೆ ಯೋಗ ಗುರು ಬಾಬಾ ರಾಮ್‌ದೇವ್ ಅವರು, ಸೂರ್ಯನಮಸ್ಕಾರ, ಮಯೂರಾಸನ, ಹಸ್ತಪಾದಾಸನ, ವಜ್ರಾಸನ, ಪದ್ಮಾಸನ, ಮತ್ಸ್ಯಾಸನ, ಶಿರ್ಷಾಸನ ಸೇರಿದಂತೆ ಯೋಗ ಹಾಗೂ ಪ್ರಾಣಾಯಾಮದ ಹಲವಾರು ಭಂಗಿಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ರವಿ ದಂಡಿನ, ಭವರಲಾಲ ಆರ್ಯ,ಕಿರಣ ಪಾಟೀಲ, ಕುಲಕರ್ಣಿ, ವಿಮಲ ತಾಳಿಕೋಟಿ, ಉಳವಪ್ಪ ಸುಣಗಾರ, ಮಸೂದ್ ಖತೀಬ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.