ಹುಬ್ಬಳ್ಳಿ: ಮಕ್ಕಳು ತನ್ನನ್ನು ನೋಡಿಕೊಳ್ಳುತ್ತಿಲ್ಲ. ಸೊಸೆಯಂದಿರು ನೀಡುತ್ತಿದ್ದ ಕಿರುಕುಳದಿಂದ ಮನನೊಂದು ಅತ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.
ಸುಶೀಲಮ್ಮ (60) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿದೆ. ಆದರೆ ಸುಶೀಲಮ್ಮನವರ ಸೊಸೆಯಂದಿರು ಪ್ರತಿನಿತ್ಯ ಕಿರಿಕಿರಿ ಮಾಡುತ್ತಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದೆಳಲಾಗುತ್ತಿದೆ.
ತಾಯಿ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಅವರ ಮಕ್ಕಳಾದ ಮಂಜುನಾಥ್, ರಾಜಪ್ಪ ಮನೆ ಲಾಕ್ ಮಾಡಿಕೊಂಡು ಕುಳಿತ್ತಿದ್ದು, ಸುಶೀಲಮ್ಮನ ಹೆಣ್ಣು ಮಕ್ಕಳು ತಮ್ಮ ಸಹೋದರರ ವಿರುದ್ಧ ಕಿಡಿಕಾರಿದ್ದು, ಮನೆಯೊಳಗಿಂದ ಹೊರ ಬರುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಸುಶಿಲಮ್ಮ ಅವರ ಪತಿ ಕೆಎಸ್ಆರ್ಟಿಸಿ ನೌಕರರಾಗಿದ್ದು, ಹುಬ್ಬಳ್ಳಿಯಲ್ಲಿ ಬೃಹತ್ ಬಂಗಲೆ ಕಟ್ಟಿಸಿದ್ದರು. ಆಸ್ತಿ ವಿಷಯಕ್ಕೆ ಸುಶೀಲಮ್ಮರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದ್ದು ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.